ಮೇರುನಟ ರಜನಿಕಾಂತ್ ಅವರ ಜೀವನ-ಸಾಧನೆಯನ್ನು ಕನ್ನಡ ನೆಲದ ಸಂಬಂಧಗಳನ್ನು ಆಧರಿಸಿ `ನನ್ನ ದಾರಿ ವಿಭಿನ್ನ ದಾರಿ' ಕೃತಿಯಲ್ಲಿ ವಿವರಿಸಲಾಗಿದೆ. ರಜನಿಕಾಂತ್ ಚಿತ್ರಗಳ ವಿವರಗಳಷ್ಟೇ ಅಲ್ಲದೇ , ಸಮಾಜ ಸೇವೆಯಲ್ಲೂ ರಜನಿಕಾಂತ್ ಅವರ ಪಾತ್ರ ಹಿರಿದೆಂಬುದನ್ನು ಈ ಪುಸ್ತಕದಲ್ಲಿ ರೂಪಿಸಲಾಗಿದೆ. ರಜನಿಕಾಂತ್ ಅವರ ಬದುಕಿನ ಚಿತ್ರಣವನ್ನು ಅ.ನಾ.ಪ್ರಹ್ಲಾದರಾವ್ ಅವರು ಕೃತಿಯಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.
ಅ.ನಾ.ಪ್ರಹ್ಲಾದರಾವ್‌ರವರು, ಕನ್ನಡದ ಪದಬಂಧ ಲೇಖಕರಲ್ಲಿ ಪ್ರಮುಖರು. ಇವರು ಕನ್ನಡದಲ್ಲಿ ಸುಮಾರು ನಲವತ್ತು ಸಾವಿರ ಪದಬಂಧಗಳನ್ನು ರಚಿಸಿದ್ದಾರೆ. ಇವರ ಪದಬಂಧಗಳು ಕನ್ನಡದ ಪ್ರಮುಖ ಪ್ರತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.ಭಾರತದ ಪ್ರಾದೇಶಿಕ ಭಾಷೆಗಳಲ್ಲಿಯೇ ಅತೀ ಹೆಚ್ಚು ಪದಬಂಧ ರಚಿಸುವ ಮೂಲಕ 2015, 2016 ಹಾಗೂ 2017ರ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರಿಕೊಳ್ಳುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದ ಕೀರ್ತಿ ಇವರದು. ಬೆಂಗಳೂರು, ಮಂಡ್ಯ ಹಾಗೂ ಕೋಲಾರದಲ್ಲಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ,ಪ್ರಜಾರತ್ನ, ಪದಬಂಧಬ್ರಹ್ಮ, ಪದಬಂಧಸಾಮ್ರಾಟ್, ಮುಂತಾದ ಬಿರುದುಗಳನ್ನು ನೀಡಿವೆ. ...
READ MORE