ದೀಪಂಕರ

Author : ಸಾ. ಕೃ. ರಾಮಚಂದ್ರರಾವ್

Pages 120

₹ 15.00




Year of Publication: 1976
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ದೀಪಂಕರ ಜೀವನಚರಿತ್ರೆ ಪುಸ್ತಕವನ್ನು ಲೇಖಕ ರಾಮಚಂದ್ರ ರಾವ್‌ ಅವರು ರಚಿಸಿದ್ದಾರೆ. ಈ ಪುಸ್ತಕದಲ್ಲಿ ಹನ್ನೊಂದನೆಯ ಶತಮಾನದ ಭಾರತದ ಅಸಾಧಾರಣ ವಿದ್ವಾಂಸ – ಸಂತ. ಹಂಬಲಿಸಿ ಹಂಬಲಿಸಿ ವರ್ಷಗಟ್ಟಲೆ ಕಾದು ಟಿಬೆಟ್‌ನ ರಾಜನೂ ಜನರೂ ಅವನನ್ನು ಬರಮಾಡಿಕೊಂಡರು. ಅವನ ವಿದ್ವತ್ತೂ ನಿರ್ಮಲ ಜೀವನವೂ ಟಿಬೆಟ್‌ಗೆ ಹೊಸಬೆಳಕನ್ನು ನೀಡಿದವು ಎಂದು ದೀಪಕರರ ಕುರಿತಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಇಲ್ಲಿ ಅವರ ಬಾಲ್ಯ ಜೀವನ, ವಿದ್ವಾಂಸನಾದ ಪರಿ, ಟಿಬೆಟಿನಲ್ಲಿ ತಂದ ಬದಲಾವಣೆಗಳು ಹೀಗೆ ಅವರ ಬದುಕಿನ ವಿವಿಧ ಘಟ್ಟಗಳನ್ನು ಲೇಖಕರು ಈ ಪುಸ್ತಕದಲ್ಲಿ ಸರಳ ಕನ್ನಡ ಭಾಷೆಯಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.

About the Author

ಸಾ. ಕೃ. ರಾಮಚಂದ್ರರಾವ್
(04 September 1927 - 02 February 2006)

ಪ್ರೊ. ಎಸ್.ಕೆ. ರಾಮಚಂದ್ರ ರಾವ್ ಅವರು ಅದ್ವಿತೀಯ ವಿದ್ವಾಸರು. ಹಾಸನದಲ್ಲಿ ಜನಿಸಿದರು. ತಂದೆ ಶ್ರೀಕೃಷ್ಣ ನಾರಾಯಣ ರಾವ್, ತಾಯಿ ಕಮಲಾಬಾಯಿ. ಬೆಂಗಳೂರಿನಲ್ಲಿಯ ತಾತನ ಮನೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಇವರು 12ನೇ ವಯಸ್ಸಿನಲ್ಲಿದ್ದಾಗ ತಾತನವರು ತೀರಿಕೊಂಡರು. ನಂತರ ನಂಜನಗೂಡಿಗೆ ಹೋಗಿ ತಂದೆಯವರಲ್ಲಿ ನೆಲೆಸಿ ಸಂಸ್ಕೃತಾಭ್ಯಾಸ ಮುಂದುವರಿಸಿದರು. ಅಲ್ಲಿ ಶೃಂಗೇರಿಯ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳ ಸಂಪರ್ಕದಲ್ಲಿ ವಿದ್ಯಾಭ್ಯಾಯ ನಡೆಯಿತು. ಮೈಸೂರಿನ ಮಹಾರಾಜ ಕಾಲೇಜು ಹಾಗೂ ಮಾನಸ ಗಂಗೋತ್ರಿಯಲ್ಲಿ ವಿದ್ಯಾಭ್ಯಾಸ ಮಾಡಿ, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇವರಿಗೆ ಸಂಗೀತಾಭ್ಯಾಸದ ಆಸಕ್ತಿ ಯೂ ಆಪಾರವಾಗಿತ್ತು. ಭಾರತೀಯ ವಿಜ್ಞಾನ ಸಂಶೋಧನೆ ಸಂಸ್ಥೆಯಲ್ಲಿ ...

READ MORE

Related Books