ಲಕ್ಷ್ಮೀ ಚಮ್ಮಿನ ಅವರ ಕೃತಿ ‘ರಂಗಾಂತರಂಗ’. ಈ ಕೃತಿಯು ಲಕ್ಷ್ಮೀಶ ಅಮ್ಮಣ್ಣಾಯ ಅವರ ಬಗ್ಗೆ ಬರೆದ ಕೃತಿಯಾಗಿದೆ. ಎಂ.ಪ್ರಾಭಾಕರ ಜೋಷಿಯವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಪರಿವಿಡಿಯಲ್ಲಿ ಪೀಠಿಕೆ, ಬೆಂಬಿಡದ ಬಡತನ, ಬಾಲ್ಯದ ಆಟ ತುಂಟಾಟ, ರಂಗಪ್ರವೇಶ, ಮಾರ್ಗದರ್ಶನ ಮಾಡಿದವರು, ಮೇಳ ಬದಲು, ಪುತ್ತೂರು ಮೇಳಕ್ಕೆ, ಕುಂಬಳೆ ಮೇಳದ ಅನುಭವ, ಮೇಳ ತಿರುಗಾಟದ ಅನುಭವ, ತಿರುಗಾಟಕ್ಕೆ ವಿದಾಯ, ಹಿರಿಯರ ಒಡನಾಟ, ಕಲೆಯನ್ನೇ ಆರಾಧಿಸುವ ಎಡನೀರು ಶ್ರೀಗಳು, ಯಕ್ಷಗಾನ ಎಂಬ ಕಾಮಧೇನು, ರಂಗಾನುಭವ, ಉಪಸಂಹಾರ ಎಂಬ ಶೀರ್ಷಿಕೆಗಳಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಕ್ಷ್ಮೀ ಮಚ್ಚಿನ ಪ್ರಸ್ತುತ ಉಡುಪಿ ನಿವಾಸಿ. ಬೆಳ್ತಂಗಡಿ ತಾಲೂಕಿನಲ್ಲಿ ಪತ್ರಕರ್ತನಾಗಿ ತನ್ನ 20ನೆಯ ವಯಸ್ಸಿಗೆ ತೊಡಗಿಸಿಕೊಂಡು ಹೊಸದಿಗಂತ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕದ ಬಳಿಕ ಉದಯವಾಣಿಯಲ್ಲಿ 2008ರಲ್ಲಿ ವರದಿಗಾರನಾಗಿ ಸೇರಿ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿ ಉಪಮುಖ್ಯ ವರದಿಗಾರನಾಗಿ ಕುಂದಾಪುರದಲ್ಲಿ 2018ರಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ಆಸಕ್ತಿ. ಕಳೆದ ಅಷ್ಟೂ ವರ್ಷಗಳಿಂದ ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಅಭ್ಯುದಯಕ್ಕಾಗಿ , ಪರಿಸರ ಪೂರಕವಾಗಿ ಮಾಡಿದ ವರದಿಗಳು ನೂರಾರು. ಇದರಲ್ಲಿ ಫಲ ಕಂಡು ಗ್ರಾಮಾಂತರದ ಸಮಸ್ಯೆ, ಬವಣೆ ನೀಗಲ್ಪಟ್ಟಿದ್ದು ಉಲ್ಲೇಖನೀಯ. ಮಾನವಾಸಕ್ತ ...
READ MORE