ಲೇಖಕ ರಾಚು ಎಸ್. ಕೊಪ್ಪಾ ಅವರ ಕೃತಿ ’ ಪ್ರವಚನ ಪಟು, ಸಂಘಟಿತ ಚೆನ್ನವೀರಶಾಸ್ತ್ರಿ ಹಿರೇಮಠ. ಚೆನ್ನವೀರಶಾಸ್ತ್ರೀ ಹಿರೇಮಠ ಅವರು ಮೂಲತಃ ಕಡಣಿ ಗ್ರಾಮದವರು ಪ್ರಸ್ತುತ ಗದುಗಿನಲ್ಲಿ ವಾಸವಾಗಿದ್ದು, ಸಂಘಟನೆ, ಸಾಹಿತ್ಯ, ಸಂಸ್ಕೃತಿಯ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಲವು ಸಮ್ಮೇಳನಗಳಲ್ಲಿ ಕವಿತಾ ವಾಚನ ಮಾಡಿದ್ದಾರೆ. ರಾಜ್ಯಮಟ್ಟದ ಸಂಘಸಂಸ್ಥೆಗಳನ್ನು ಸ್ಥಾಪಿಸಿ ನಾಡಿನ ತುಂಬ ಕಡಣಿ ಹೆಸರನ್ನು ತಮ್ಮ ಹೆಸರಿನೊಂದಿಗೆ ಪಸರಿಸಿದ್ದಾರೆ. ಪ್ರಕಾಶನ ಸಂಸ್ಥೆಯೊಂದನ್ನು ಕಟ್ಟಿ ಇಪ್ಪತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಪ್ರಕಟಿಸಿದ ಚನ್ನವೀರಶಾಸ್ತ್ರೀ ಅವರು ಸಾಹಿತ್ಯ ಕೃಷಿಯಲ್ಲೂ ಉತ್ತಮ ಫಸಲು ನೀಡಿದ್ದಾರೆ. ಸಂಗೀತ ಶಿಕ್ಷಕರ ನೇಮಕಾತಿಯನ್ನು ಸರಕಾರ ಮಾಡಿಕೊಳ್ಳುವಲ್ಲಿ ಚೆನ್ನವೀರಶಾಸ್ತ್ರೀಯವರ ಹೋರಾಟದ ಹಾದಿ ಗಮನಿಸುವಂತಹದ್ದು, ದೆಹಲಿ, ಕೋಲ್ಕತ್ತಾ, ಮುಂಬಯಿ, ಮದ್ರಾಸ, ಹೈದ್ರಾಬಾದ್ ಮೊದಲಾದಡೆಗಳಲ್ಲಿ ಸಂಗೀತ ಕಚೇರಿಗಳನ್ನು ನಡೆಸಿದ್ದಾರೆ, ಸಂಗೀತ ಸಮ್ಮೇಳನ, ಉತ್ಸವಗಳನ್ನು ಸಂಘಟಿಸಿದ ಚತುರರ ಈ ಕೃತಿಯು ಸಾಧನೆಯನ್ನೊಳಗೊಂಡ ಉಪಯುಕ್ತ ಮಾಹಿತಿಯಿಂದ ಕೂಡಿದೆ.
ಲೇಖಕ ರಾಚು ಎಸ್. ಕೊಪ್ಪಾ ಅವರು ಬಳಗಾನೂರು ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು. ಹಲವಾರು ಪ್ರಶಸ್ತಿ ಗೌರವಗಳಿಗೆ ಭಾಜನರಾಗಿದ್ದಾರೆ. ಕೃತಿಗಳು: ಪ್ರವಚನ ಪಟು, ಕಲಾ ಆರಾಧಕ ಚೆನ್ನವೀರಶಾಸ್ತ್ರೀ ಹಿರೇಮಠ. ...
READ MORE