ಲೇಖಕಿ ಡಾ. ಮಮತಾ ಅವರು ಬರೆದಿರುವ ಪುಸ್ತಕ ’ಜಯಂತ ಕಾಯ್ಕಿಣಿಯವರ ಕಥನಾವರಣ’.
ಸಾಹಿತಿ, ಲೇಖಕ, ಕಥೆಗಾರ, ನಾಟಕಕಾರ, ಗೀತರಚನಾಕಾರರಾದ ಜಯಂತ ಕಾಯ್ಕಿಣಿಯವರ ಸಾಹಿತ್ಯವನ್ನು ಸಮಗ್ರವಾಗಿ ಗ್ರಹಿಸಿ ಅವರ ಜೀವನ, ಬದುಕು, ಸಾಧನೆ, ವ್ಯಕ್ತಿ ಚಿತ್ರಣವನ್ನು ಓದುಗರಿಗೆ ಸಂಕ್ಷಿಪ್ತವಾಗಿ ಪರಿಚಯಿಸುವ ಕೃತಿಯನ್ನು ಮಮತಾ ಅವರು ’ಜಯಂತ ಕಾಯ್ಕಿಣಿಯವರ ಕಥನಾವರಣ’ ದಲ್ಲಿ ತಂದಿದ್ದಾರೆ.
ಕಾವ್ಯ, ಕಥೆ, ನಾಟಕ, ಅಂಕಣಬರಹ ಹೀಗೆ ವಿಭಿನ್ನ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿರುವ ಜಯಂತರು ತಮ್ಮ ಬರವಣಿಗೆಯ ಮೂಲಕ ಅಭಿವ್ಯಕ್ತಿಸುವ , ಅವರ ಬದುಕಿನ ಚಿತ್ರಣವನ್ನು ತಿಳಿಸುವ ಈ ಕೃತಿ ಅವರ ಭಾಷೆ, ಸಂವೇದನೆ, ಮತ್ತು ವಸ್ತುವಿನ ಆಯ್ಕೆಯಲ್ಲಿರುವ ಅಭಿರುಚಿ ಇವುಗಳನ್ನು ಓದುಗರಿಗೆ ಸೂಕ್ಷ್ಮವಾಗಿ ಈ ಕೃತಿ ತಿಳಿಸಿಕೊಡುತ್ತದೆ.
ಆಧುನಿಕ ಕನ್ನಡ ಸಾಹಿತ್ಯ ರಚನೆಯ ಬಗ್ಗೆ ವಿವರಿಸುತ್ತಾ ಜಯಂತರ ರಚನೆಯನ್ನು ಪರಿಚಯಿಸುತ್ತಾ , ಜಯಂತರ ಬದುಕು – ಬರಹ, ಜಯಂತರೊಂದಿಗೆ ಆತ್ಮೀಯ ಸಂವಾದ, ಗೋಕರ್ಣದ ಹಿನ್ನೆಲೆಯಲ್ಲಿ ಬರೆದ ಕಥೆಗಳು, ಮುಂಬಯಿಯ ಕಥೆಗಳು, ಜಯಂತರ ಕಥೆಗಳಲ್ಲಿ ’ನಗರ ಜಾನಪದ’, ಜಯಂತರ ಕಥೆಗಳ ಅನನ್ಯತೆ ಎಂಬ ಅಧ್ಯಯನಗಳ ಮೂಲಕ ಜಯಂತ ಕಾಯ್ಕಿಣೆಯವರ ಜೀವನ ಸಾಹಿತ್ಯವನ್ನು ಅರಿಯಬಹುದು.
ಮುಂಬೈ ನಿವಾಸಿಯಾಗಿರುವ ಮಮತಾ ರಾವ್ ಅವರು ಮೂಲತಃ ಮಂಗಳೂರಿನವರು. ಜನಿಸಿದ್ದು 1957ರ ಜನೆವರಿ 21. ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ಮುಂಬಯಿ ವಿ.ವಿ.ಯಿಂದ ಕನ್ನಡ ಎಂ.ಎ.ಯನ್ನು ವರದರಾಜ ಸ್ವರ್ಣಪದಕ ಮತ್ತು ಮಹಾರಾಷ್ಟ್ರ ರಾಜ್ಯಪಾಲರ ಸ್ವರ್ಣಪದಕ ಪಡೆದ ವಿದ್ಯಾರ್ಥಿನಿ ಆಗಿದ್ದರು. ಗಿರೀಶ ಕಾರ್ನಾಡರ ನಾಟಕಗಳಲ್ಲಿ ಸ್ತ್ರೀ ಸಂವೇದನೆ ಸಂಶೋಧನೆಗೆ ಎಂ.ಫಿಲ್ ಪದವಿ ಪಡೆದಿದ್ದಾರೆ. ಕನ್ನಡ ಕಥಾ ಸಾಹಿತ್ಯ ಕುರಿತು ಪಿಎಚ್.ಡಿ. ಪದವಿ ಪಡೆದಿದ್ದರು. ಕೈಲಾಸಾಧಿಪತಿಯ ಮನೆಯಂಗಳದಲ್ಲಿ (2007) ಅವರ ಪ್ರಕಟಿತ ಪ್ರವಾಸ ಕಥನ. ಮುಂಬೈ ಕನ್ನಡ ಲೇಖಕಿಯರ ಬಳಗ ’ಸೃಜನಾ’ದ ಮಾಜಿ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಯಾಗಿದ್ದರು. ...
READ MORE