ಭಾರತದ ಶ್ರೇಷ್ಠ ಕಲಾವಿದ ಕೆ.ಕೆ.ಹೆಬ್ಬಾರ್ ಅವರ ಜೀವನಚರಿತ್ರೆಯೇ ಈ ಕೃತಿ. ಲೇಖಕ ಎನ್. ಮರಿಶಾಮಾಚಾರ್ ರಚಿಸಿದ್ದಾರೆ. ಭಾರತ ಕಲಾ ಪ್ರಪಂಚದಲ್ಲಿ ವಿಚಾರವಂತರೂ, ಸೂಕ್ಷ್ಮ ಸಂವೇದನಾಶೀಲರೂ, ಶ್ರೇಷ್ಠ ಕಲಾವಿದರು ಎಂದು ಪ್ರಖ್ಯಾತಿಗಳಿಸಿದವರಲ್ಲಿ ಕೆ.ಕೆ.ಹೆಬ್ಬಾರ್ ಒಬ್ಬರು. ಹೆಬ್ಬಾರರ ಕಲಾಭ್ಯಾಸವು ಮುಂಬಯಿಯಲ್ಲಿ ಪಾಶ್ಚಿಮಾತ್ಯ ಪದ್ಧತಿಯಲ್ಲಿ ನಡೆಯಿತು. ಅವರು ಅಷ್ಟಕ್ಕೆ ತೃಪ್ತರಾಗಲಿಲ್ಲ. ಅವರಲ್ಲಿ ತನ್ನ ದೇಶದ ಪ್ರಾಚೀನ ಕಲಾವೈಭವದ ಬೆಡಗೂ, ನಮ್ಮೀ ಶತಮಾನದ ಪ್ರಾರಂಭದಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ, ಮುಖ್ಯವಾಗಿ ಪ್ಯಾರಿಸ್ ನಲ್ಲಿ ಹುಟ್ಟಿ ಕಲಾಜಗತ್ತಿನಲ್ಲಿ ಕ್ರಾಂತಿ ಎಬ್ಬಿಸಿದ ಆಧುನಿಕ ಕಲೆಯಲ್ಲೂ ಅಭಿಮಾನ ಮೂಡಿತು ಮತ್ತು ಬೆಳೆಯಿತು. ಈ ಬಗ್ಗೆ ವಿವರ ಮಾಹಿತಿ ಇದೆ. ಹೆಬ್ಬಾರರ ಕಲಾ ಬದುಕಿನ ವಿವರಗಳೊಂದಿಗೆ ವೈಯಕ್ತಿಕ ಬದುಕಿನ ವಿವರಗಳೂ ಈ ಕೃತಿಯಲ್ಲಿವೆ.
ಕರ್ನಾಟಕದ ಕಲಾವಲಯದ ಹಿರಿಯರು ’ಮರಿ’ ಎಂದು ಕರೆಯುತ್ತಿದ್ದ ಎನ್. ಮರಿಶಾಮಾಚಾರ್ ಅವರು ರಾಜ್ಯದ ಅಪರೂಪದ ಕಲಾಪರಿಚಾರಕ-ಲೇಖಕ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದ ಮರಿಶಾಮಾಚಾರ್ ಅವರು ಕಲಾಸಾಹಿತಿ. ’ನಡೆದಾಡುವ ಕಲಾಕೋಶ’ ಎಂದು ಕಲಾವಲಯದಲ್ಲಿ ಅವರನ್ನು ಗುರುತಿಸಲಾಗುತ್ತಿತ್ತು. ವಿಜಯಪುರದಲ್ಲಿ 1951ರ ಮೇ 15ರಂದು ಜನಿಸಿದ ಮರಿಶಾಮಾಚಾರ್ ಅವರು ಜಯನಗರದ ಆರ್.ವಿ. ಹೈಸ್ಕೂಲಿನಲ್ಲಿ ಓದುತ್ತಿರುವಾಗ ಡ್ರಾಯಿಂಗ್ ಮಾಡಲು ಆರಂಭಿಸಿದ್ದರು. ಅವರ ಅಣ್ಣ ಕೆನ್ ಶಾಲೆಯ ವಿದ್ಯಾರ್ಥಿಯಾಗಿದ್ದ. ಕಲೆಯ ಅಭಿರುಚಿ ಬಂದದ್ದು ಅವರ ಅಣ್ಣನಿಂದಲೇ. ಅಣ್ಣನ ಮೂಲಕ ಪರಿಚಯವಾದ ಕಲಾಗುರು ಆರ್.ಎಂ. ಹಡಪದ ಅವರ ಶಿಷ್ಯರಾಗಿದ್ದ ’ಮರಿ’ ಅವರು ಅವರ ಬಳಿ ಐದು ವರ್ಷ ...
READ MORE