ಅಶೋಕ ಸಾಮ್ರಾಟನ ಸಂಪೂರ್ಣ ಚಿತ್ರವನ್ನು ಮಕ್ಕಳಿಗೆ ತಿಳಿಯುವಂತೆ ಲೇಖಕ ಜಿ.ಪಿ. ರಾಜರತ್ನಂ ಅವರು ಸರಳವಾಗಿ ಬರೆದ ಕೃತಿ-ಅಶೋಕ ಮೌರ್ಯ. ಚಂದ್ರಗುಪ್ತ, ಬಿಂದುಸಾರ ಹಾಗೂ ಅಶೋಕ ಮೌರ್ಯ ಹೀಗೆ ಸಂಕ್ಷಿಪ್ತ ಪರಿಚಯದೊಂದಿಗೆ ಪ್ರವೇಶಾತಿ ಪಡೆಯುವ ಈ ಪುಸ್ತಕ, ಕಳಿಂಗ ಯುದ್ಧಕ್ಕೂ ಮುನ್ನ ಹಾಗೂ ಕಳಿಂಗ ಯುದ್ಧದ ನಂತರ, ಅಲ್ಲಿಂದ ಮುಂದೆ, (ಅಶೋಕನ ಧರ್ಮ ಕಾರ್ಯಗಳು, ಮೂರನೇ ಬೌದ್ಧ ಮಹಾಸಭೆ, ಸಿಂಹಳದಲ್ಲಿ ಮತ ಪ್ರಚಾರ, ಅಶೋಕನ ಕ್ಷೇತ್ರಯಾತ್ರೆ, ಏಳು ಶಿಲಾಸ್ತಂಭ ಶಾಸನಗಳು) ಹಾಗೂ ಎರಡು ಕಥೆಗಳು (ಅಶೋಕನ ತಮ್ಮ ವೀತ ಶೋಕ ಹಾಗೂ ಮನುಷ್ಯನ ಬೆಲೆ ಏನು) ಮತ್ತು ಅಶೋಕನ ಕಡೆಯ ದಿನಗಳು ಹೀಗೆ ವಿವಿಧ ಶೀರ್ಷಿಕೆಯಡಿ ಅಶೋಕನ ಒಟ್ಟು ವ್ಯಕ್ತಿತ್ವವನ್ನು ಇತಿಹಾಸದ ಸಂಗತಿಗಳ ಮೂಲಕ ಕಟ್ಟಿಕೊಡಲಾಗಿದೆ.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...
READ MORE