ಜ್ಞಾನದಾತೆ ಸಾವಿತ್ರಿ ಭಾಯಿ ಫುಲೆ

Author : ಡಾ. ಧರಣೀದೇವಿ ಮಾಲಗತ್ತಿ

Pages 96

₹ 96.00




Year of Publication: 2021
Published by: ಚೇತನ ಬುಕ್ ಹೌಸ್
Address: ಮುತ್ತು ರಂಗ ವಿಲಾಸ, ನಂ. 810 ನಾರಾಯಣಶಾಸ್ತ್ರಿ ರಸ್ತೆ, ಮಹದೇಶ್ವರ ದೇವಸ್ಥಾನದ ಎದುರು ಸುಣ್ಣದಕೇರಿ, ಮೈಸೂರು-24
Phone: 9338752666

Synopsys

‘ಜ್ಞಾನದಾತೆ ಸಾವಿತ್ರಿ ಭಾಯಿ ಫುಲೆ’ ಧರಣಿದೇವಿ ಮಾಲಗತ್ತಿ ಅವರು ಸಂಪಾದಿಸಿರುವ ಸಾವಿತ್ರಿ ಭಾಯಿ ಫುಲೆ ಅವರ ಜೀವನ ಚಿತ್ರಣ. ಈ ಕೃತಿಯಲ್ಲಿ ಸ್ತ್ರೀ ಶಿಕ್ಷಣದ ನೀಲಾಕಾಶದ ಧ್ರುವ ನಕ್ಷತ್ರ, ಸಾವಿತ್ರಿಬಾಯಿಯವರು ಪತಿಗೆ ಬರೆದ ಪತ್ರಗಳು, ಮುಕ್ತಾ ಬಾಯಿಯ ಲೇಖನ, ಮಾಂಗ್ ಮಹಾರ್, ಸಾವಿತ್ರಿಬಾಯಿಯವರ ಸಾಹಿತ್ಯದಲ್ಲಿ ಶೂದ್ರರು, ಶೂದ್ರರ ಜಾಗೃತಿಗೆ ಕರೆ, ಶಿಕ್ಷಣದ ಮಹತ್ವ, ಶೂದ್ರರ ಸ್ಥಿತಿಗತಿಗೆ ಕಾರಣ, ಅಂಗ್ರೇಜಿ ಮಯ್ಯಾ, ಮೂಢನಂಬಿಕೆಗಳ ಬಗ್ಗೆ ಟೀಕೆ, ಶ್ರಮಶಕ್ತಿಗೆ ಗೌರವ, ಸಾವಿತ್ರಿಬಾಯಿಯವರ ಜೀವನ ಜ್ಯೋತಿ ಜ್ಯೋತಿಬಾ, ಸತಿಪತಿಗಳೊಂದಾದ ಕ್ರಾಂತಿ, ಮಹಾತಾಯಿಗೆ ನಮನ, ಆಕರ ಗ್ರಂಥಗಳು, ಇದೇ ಲೇಖಕರ ಇತರ ಕೃತಿಗಳು ಎಂಬ 16 ಲೇಖನಗಳು ಸಂಕಲನಗೊಂಡಿವೆ.

About the Author

ಡಾ. ಧರಣೀದೇವಿ ಮಾಲಗತ್ತಿ
(12 May 1967)

ಕವಿ, ಮಹಿಳಾಪರ ಸಾಹಿತಿ ಧರಣೀದೇವಿ ಮಾಲಗತ್ತಿ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಉದ್ದೆಗಳನ್ನು ನಿರ್ವಹಿಸಿ ಸದ್ಯ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವರಾದ ಧರಣೀದೇವಿಯವರ ತಂದೆ- ಪಿ.ದೂಮಣ್ಣ ರೈ, ತಾಯಿ- ದೇವಕಿ ಡಿ.ರೈ. ಕುಕ್ಕಾಜೆ. ಬಿಬಿಎಂ ಹಾಗೂ ಎಂ.ಕಾಂ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರು ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿಯನ್ನು ಪಡೆದಿದ್ದಾರೆ.  1990ರಿಂದ 1991 ರ ವರೆಗೆ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಿಯಾಗಿ, 1991 ರಿಂದ 1993 ರ  ವರೆಗೆ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1993ರಿಂದ 94ರ ವರೆಗೆ ...

READ MORE

Related Books