ಕಾರ್ ಸಾಮ್ರಾಜ್ಯದ ಸಾಮ್ರಾಟ ಹೆನ್ರಿ ಫೋರ್ಡ್

Author : ಸಿಡ್ನಿ ಶ್ರೀನಿವಾಸ

Pages 48

₹ 25.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: # ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ಲೇಖಕ ಸಿಡ್ನಿ ಶ್ರೀನಿವಾಸ ಅವರ ಕೃತಿ-ಕಾರ್ ಸಾಮ್ರಾಜ್ಯದ ಸಾಮ್ರಾಟ ಹೆನ್ರಿ ಫೋರ್ಡ್. ಲೇಖಕರು ಹೇಳುವಂತೆ ‘ಒಂದು ಉತ್ಪನ್ನವನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಿದಾಗ, ಸಹಜವಾಗಿ ಅದರ ಒಟ್ಟು ಉತ್ಪಾದನಾ ವೆಚ್ಚ ತಗ್ಗುತ್ತದೆ’. ಈ ತತ್ವವನ್ನು ಸಮರ್ಥವಾಗಿ ಜಾರಿಗೆ ತಂದವರು ಹೆನ್ರಿ ಫೋರ್ಡ್. ಅತ್ಯುತ್ತಮ ತಂತ್ರಜ್ಞರನ್ನು ತನ್ನ ಸಂಸ್ಥೆಗೆ ಆಕರ್ಷಿಸಲು ದುಪ್ಪಟ್ಟು ಮಜೂರಿಯನ್ನು ನೀಡಿದನು. ಅಂದು ಕಾರ್ಮಿಕನೊಬ್ಬ ದೈನಂದಿನ ವೇತನ 2.34 ಡಾಲರ್. ಫೋರ್ಡ್ ಈ ವೇತನವನ್ನು 5 ಡಾಲರಿಗೆ ಏರಿಸಿದನು. ಕಾರು ಮಾರಾಟದಲ್ಲಿ ಬಂದ ಲಾಭದಲ್ಲಿ ನಿಗದಿತ ಪ್ರಮಾಣವನ್ನು ತನ್ನ ಕಾರ್ಮಿಕರಿಗೆ ಹಂಚಿದನು. ತನ್ನ ಕೆಲಸಗಾರರು ಉತ್ತಮ ಬದುಕನ್ನು ನಡೆಸಲು ನೆರವಾಗಲು ‘ಸೋಶಿಯಲ್ ಡಿಪಾರ್ಟ್ಮೆಂಟ್‘ ಆರಂಭಿಸಿ ಕಾರ್ಮಿಕರು ಧೂಮಪಾನ, ಮದ್ಯಪಾನ, ಜೂಜು ಮುಂತಾದ ಚಟುವಟಿಕೆಗಳಿಂದ ದೂರವಿರುವಂತೆ ಎಚ್ಚರವಹಿಸಿದನು. ತನ್ನ ದುಡಿತದ ಹಣವನ್ನು ಪೋರ್ಡ್ ಪ್ರತಿಷ್ಠಾನದಲ್ಲಿಟ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿದನು. ಇಷ್ಟೆಲ್ಲ ಒಳ್ಳೆಯ ಗುಣಗಳು ಹಾಗೂ ದೂರದರ್ಶಿತ್ವವಿದ್ದರೂ ಈತ ಕಾರ್ಮಿಕ ಸಂಘಗಳನ್ನು ಹಾಗೂ ಯಹೂದಿಯನ್ನು ದ್ವೇಷಿಸುತ್ತಿದ್ದನು. ಹಿಟ್ಲರಿನಿಂದ ಸನ್ಮಾನಿತನಾದನು. ಇಂತಹ ಕೆಲಸ ಮಹತ್ವದ ಸಂಗತಿಗಳ ಮಾಹಿತಿಯನ್ನು, ಹೆನ್ರಿ ಫೋರ್ಡ್ ನ ಬದುಕು-ವ್ಯವಹಾರಗಳ ಚಿತ್ರಣ ನೀಡುವ ಕೃತಿ ಇದು.

About the Author

ಸಿಡ್ನಿ ಶ್ರೀನಿವಾಸ

ಸಿಡ್ಡಿ ಶ್ರೀನಿವಾಸ ಅವರು ಬೆಂಗಳೂರಿನವರು. ಇವರ ಮೂಲ ಹೆಸರು- ಕರ್ಕೆನಹಳ್ಳಿ ಶ್ರೀನಿವಾಸ. ಸದ್ಯ ಅವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿದ್ದಾರೆ. ಅಲನ್ ಟೂರಿಂಗ್ ಫೋರ್ಡ್, ಅಲ್ಬರ್ಟ್ ಐನ್ ಸ್ಟಿನ್, ಐಸಾಕ್ ನ್ಯೂಟನ್, ಗೆಲಿಲಿಯೊ, ಮೇರಿ ಕ್ಯೂರಿ, ಶ್ರೀನಿವಾಸ ರಾಮಾನುಜನ್ ಇವರ ಕುರಿತು ಜೀವನ ಚಿತ್ರಗಳನ್ನು ಚಿತ್ರಿಸಿರುವ ಕೃತಿಗಳನ್ನು ರಚಿಸಿದ್ದಾರೆ.  ಲ್ಯಾಂಗ್ಲೊ ಪಾರ್ಕರ್ ಎ.ಕೆ. ಅವರ ಕೃತಿಯನ್ನು ‘ಆಸ್ಟ್ರೇಲಿಯಾದ ಜಾನಪದ ಕತೆಗಳು’ ಶೀರ್ಷಿಕೆಯಡಿ ಕನ್ನಡಕ್ಕೆ ರೂಪಾಂತರಿಸಿದ್ದಾರೆ.    ...

READ MORE

Related Books