ಕಸ್ತೂರಬಾ ಗಾಂಧಿ ಅವರು ಮಹಾತ್ಮ ಗಾಂಧೀಜಿ ಅವರ ಹೋರಾಟಕ್ಕೆ ಬೆಂಬಲವಾಗಿ ನಿಂತವರು. ಗಾಂಧೀಜಿಯವರೊಂದಿಗೆ ಹೋರಾಟಗಳಲ್ಲಿ ಭಾಗವಹಿಸುವುದು ಮಾತ್ರವಲ್ಲದೇ, ಗಾಂಧಿ ಮಾರ್ಗದಲ್ಲಿ ನಡೆದವರು. ಸರಳ ಜೀವನ, ಅಪರಿಗೃಹ ವ್ರತವನ್ನು ಸ್ವೀಕರಿಸಿದ ಗಾಂಧೀಜಿಯವರು ತಮ್ಮ ವೈಯಕ್ತಿಕ ವಸ್ತುಗಳನ್ನು ದಾನ ಮಾಡಲು ಹೇಳಿದಾಗ ಕಸ್ತೂರಬಾ ಅವರು ಎಲ್ಲವನ್ನೂ ದಾನ ಮಾಡುತ್ತಾರೆ. ಹೀಗೆ ಗಾಂಧಿಯವರ ಹೋರಾಟದಲ್ಲಿ ಅವರಿಗೆ ಜೊತೆಯಾಗಿದ್ದ ಕಸ್ತೂರಬಾ ಅವರನ್ನು ಗೀತಾ ಶೆಣೈ ಅವರು ಪರಿಚಯಿಸಿದ್ದು, ಡಾ. ನಾ. ಸೋಮೇಶ್ವರ ಸಂಪಾದಿಸಿದ್ದಾರೆ.
ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'. ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...
READ MORE