ಶ್ರೀಕೃಷ್ಣ ಆಲನಹಳ್ಳಿ ಈ ವಾಚಿಕೆಯಲ್ಲಿ, ಸಂಪಾದಕರಾದ ವಿವೇಕ ಶಾನಭಾಗರು ಶ್ರೀಕೃಷ್ಣ ಆಲನಹಳ್ಳಿಯವರ ಆಯ್ದ ಕವಿತೆಗಳು, ಕಥೆಗಳು ಮತ್ತು ಕಾದಂಬರಿಯ ಭಾಗಗಳನ್ನು ಪ್ರಸ್ತುತಪಡಿಸಿದ್ದಾರೆ.
ವಿವೇಕ ಶಾನಭಾಗರು ಈ ವಾಚಿಕೆಯ ಪ್ರಸ್ತಾವನೆಯಲ್ಲಿ ಹೇಳಿದ ಕೆಲವು ವಿಚಾರಗಳು: "ಕೃಷ್ಣರ ಆರಂಭದ ಕವಿತೆಗಳು ಅವುಗಳ ರಭಸ, ಭಾಷೆಯ ಸೊಕ್ಕು, ಮತ್ತು ಅನುಭವಗಳ ದಿಟ್ಟ ನಿರೂಪಣೆಯಿಂದ ಗಮನ ಸೆಳೆದವು." "ಗಂಡು -- ಹೆಣ್ಣಿನ ಸಂಬಂಧಗಳ ಅನ್ವೇಷಣೆಯು ಕೃಷ್ಣರ ಕತೆಗಳ ಪ್ರಧಾನ ಧಾರೆಯೆಂದು ಗುರುತಿಸಲ್ಪಟ್ಟಿದೆ." "ಅವರ 'ತಪ್ತ' ಮತ್ತು 'ತೊರೆ' ಕತೆಗಳು ಹಳ್ಳಿಯ ಮತ್ತು ನಗರದ ಹೆಣ್ಣುಗಳ ನಡುವೆ ತುಯ್ದಾಡುವ ನಾಯಕನ ಮನಃಸ್ಥಿತಿಯನ್ನು ಬಿಂಬಿಸುತ್ತವೆ."
ವಿವೇಕ ಶಾನಭಾಗ ಅವರು ಉತ್ತರ ಕನ್ನಡ ಜಿಲ್ಲೆಯವರು. ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ವಿವೇಕ ಅವರು 'ದೇಶಕಾಲ' ಎಂಬ ಸಾಹಿತ್ಯಕ ಪತ್ರಿಕೆಯನ್ನೂ ಏಳು ವರ್ಷ ಕಾಲ ನಡೆಸಿದರು. ಹೊಸ ಬಗೆಯ ಕಥೆ ಕಟ್ಟುವ ಅವರು ಸಣ್ಣ ಊರು ಅಥವಾ ವಿಶಾಲ ಜಗತ್ತುಗಳೆರಡರಲ್ಲಿಯೂ ಮನುಷ್ಯರ ಮನಸ್ಸಿನ ಆಯಾಮ ಗುರುತಿಸಬಲ್ಲರು. ಅವರ ’ಘಾಚರ್ ಘೋಚರ್ ನೀಳ್ಗತೆಯ ಇಂಗ್ಲಿಷ್ ಅನುವಾದ ಜಗತ್ತಿನ ಸಾಹಿತ್ಯ ವಲಯದ ಗಮನ ಸೆಳೆದಿದೆ. ಲಂಡನ್, ಅಮೆರಿಕಗಳಲ್ಲಿ ಪ್ರತ್ಯೇಕ ಆವೃತ್ತಿ ಕಂಡಿರುವ ಈ ಕೃತಿ ಜಗತ್ತಿನ 18 ಭಾಷೆಗಳಿಗೆ ಅನುವಾದಗೊಂಡು ಮಚ್ಚುಗೆ ಗಳಿಸಿದೆ. ಅಂಕುರ, ಲಂಗರು, ಹುಲಿಸವಾರಿ, ಮತ್ತೊಬ್ಬನ ...
READ MORE