ಭಾರತೀಯ ಸಾಹಿತ್ಯ ನಿರ್ಮಾಣಕಾರ ಮಾಲೆಯಡಿ ಸಾಹಿತ್ಯ ಅಕಾಡೆಮಿಯು ಸಂಸ್ಕೃತ ಕವಿ ಭವಭೂತಿಯ ಜೀವ ಚರಿತ್ರೆ ಕುರಿತಂತೆ ಜಿ.ಕೆ.ಭಟ್ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ಡಾ.ಕೆ. ಕೃಷ್ಣಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದೇ ಈ ಕೃತಿ-ಭವಭೂತಿ. ಈ ಕವಿಯ ಕಾಲ, ದೇಶ, ಬದುಕು-ಸಾಹಿತ್ಯ ಸಾಧನೆ,ಮನೋಧರ್ಮ ಮತ್ತು ವಿಚಾರಗಳು, ಪ್ರತಿಪಾದಿಸಿದ ಕಲೆ ಎಲ್ಲವನ್ನೂ ಈ ಕೃತಿ ಒಳಗೊಂಡಿದೆ. ಭವಭೂತಿಯ ಕಾಲ ಕುರಿತಂತೆ ಈವರೆಗೂ ಖಚಿತತೆ ಇಲ್ಲವಾದರೂ, ಈತನ ಸಾಹಿತ್ಯದಲ್ಲಿ ಕಾಳಿದಾಸನ ನಾಟಕಗಳ ಪ್ರಭಾವಗಳ ದಟ್ಟತೆಯನ್ನು ಕಾಣಬಹುದು. ಹೀಗಾಗಿ. ಭವಭೂತಿಯು ಕಾಳಿದಾಸನ ನಂತರದ ಕವಿ ಎಂದು ನಿಸ್ಸಂದೇಹವಾಗಿ ಹೇಳಬಹುದು ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ.
ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...
READ MORE