ಜನಮನಶಿಲ್ಪಿ

Author : ಚಂದ್ರಶೇಖರ ಭಂಡಾರಿ

Pages 90

₹ 55.00




Year of Publication: 2000
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ಜನಮನಶಿಲ್ಪಿ'  ಈ ಕೃತಿಯು ಧುರೀಣ ಯಾದವರಾವ್ ಜೋಶಿ ಅವರ ಜೀವನ ಚಿತ್ರಣವಾಗಿದೆ. ಲೇಖಕ ಚಂದ್ರಶೇಖರ ಭಂಡಾರಿ ಈ ಕೃತಿಯ ಲೇಕಕರು. ಕೃತಿಯಲ್ಲಿ ತಮ್ಮ ಮನೆತನದ ಏಕಮಾತ್ರ ಪುತ್ರನಾಗಿ, 1914ರಲ್ಲಿ ನಾಗಪುರದಲ್ಲಿ ಜನಿಸಿದ ಯಾದವರಾವ್ ಜೋಶಿ, ಬಾಲ್ಯದಲ್ಲೇ ’ಸಂಗೀತ ಬಾಲಭಾಸ್ಕರ’ ಎಂದು ಬಿರುದಾಂಕಿತರಾಗಿದ್ದವರು. ಆದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾಕ್ಟರ್ ಹೆಡಗೆವಾರರ ಸಂಪರ್ಕಕ್ಕೆ ಬಂದ ನಂತರ, ಕೀರ್ತಿಶಿಖರದಲ್ಲಿರುವಾಗಲೇ ’ಸಂಗೀತ ಸಂನ್ಯಾಸ’ ಸ್ವೀಕರಿಸಿದರು. ಮುಂದಿನ ಜೀವನದಲ್ಲಿ ಸಂಘವೇ ಅವರಿಗೆ ಬದುಕಿನ ಶ್ರುತಿಯಾಯಿತು. ಸಂಘದ ಹಿರಿಯ ಪ್ರಚಾರಕರಾಗಿದ್ದ ಬಾಬಾಸಾಹೇಬ ಆಪ್ಟೆ ಹಾಗೂ ಡಾಕ್ಟರ್ ಹೆಡಗೆವಾರರ ಪ್ರೇರಣಾಪೂರ್ಣ ನಿಕಟ ಸಹವಾಸದಲ್ಲಿ ತಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಂಡ ಯಾದವರಾಯರು, ಎಂ.ಎ.ಎಲ್.ಎಲ್.ಬಿ ಪದವೀಧರರು. ರಾಷ್ಟ್ರಕಾರ್ಯಕ್ಕಾಗಿಯೇ ತಮ್ಮನ್ನು ಸಮರ್ಪಿಸಿಕೊಂಡರು. ಜೋಶಿ ಅವರ ಜೀವನದ ವಿವಿಧ ಹಂತಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

About the Author

ಚಂದ್ರಶೇಖರ ಭಂಡಾರಿ

ಲೇಖಕ ಚಂದ್ರಶೇಖರ ಭಂಡಾರಿ ಅವರನ್ನು ‘ಸ್ಟಾಲ್‌ ಆಫ್‌ ದಿ ಅರ್ತ್‌’ ಎಂದು ಕೂಡ ಕರೆಯುತ್ತಾರೆ. ಅನೇಕ ಸಮಾಜದ ಏಳಿಗೆಗಾಗಿ ಕೃತಿಗಳನ್ನು ರಚಿಸಿದ ಇವರಿಗೆ ಕುವೆಂಪು ಭಾಷಾ ಪ್ರಾಧಿಕಾರದ ಪುಸ್ತಕ ಬಹುಮಾನ (2011ರಲ್ಲಿ) ಲಭಿಸಿದೆ. ಕೃತಿಗಳು; ಕುಟುಂಬ- ಒಂದು ಚಿಂತನೆ. ಜನಮನ ಶಿಲ್ಪಿ, ರಾಷ್ಟ್ರನಾಯಕ ಡಾ. ಅಂಬೇಡ್ಕರ್, ನಾನಾನಿಂದ ನೇತಾಜಿವರೆಗೆ ಸ್ವಾತಂತ್ಯ್ರ ಸಂಗ್ರಾಮ 1857-1957.ಪ್ರಕ್ಷುಬ್ಧ ಕಾಶ್ಮೀರ  ...

READ MORE

Related Books