ಶ್ರೀರಾಮಕೃಷ್ಣ ಪರಮಹಂಸರ ಕುರಿತು ಹಲವಾರು ಕೃತಿಗಳು ಕನ್ನಡ ಸಾಹಿತ್ಯದಲ್ಲಿ ಮೂಡಿ ಬಂದಿವೆ. ಆದರೆ, ಲೇಖಕ ಎನ್. ಶಂಕರಪ್ಪ ತೋರಣಗಲ್ಲು ಅವರು ಶ್ರೀ ರಾಮಕೃಷ್ಣರ ವ್ಯಕ್ತಿತ್ವವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿದ್ದು, ಈ ಕೃತಿಯ ವೈಶಿಷ್ಟ್ಯ. ಅವರ ಕುರಿತು ಇರುವ ಕೆಲವು ದೃಷ್ಟಾಂತಗಳನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡಿದ್ದಾರೆ. ಜನರಲ್ಲಿದ್ದ ಭ್ರಮೆಗಳನ್ನು ಹೋಗಲಾಡಿಸಿದ್ದಾರೆ. ಸಾಮಾನ್ಯ ವ್ಯಕ್ತಿಯಾಗಿಯೂ ಶ್ರೀ ರಾಮಕೃಷ್ಣರು ಅಸಾಮಾನ್ಯ ವ್ಯಕ್ತಿತ್ವವನ್ನು ಪಡೆದ ಬಗೆಯನ್ನು, ಅಧ್ಯಾತ್ಮಿಕ ನೋಟವನ್ನು ವಿವರಿಸಿ, ಆ ಮೂಲಕ ಅವರ ಜೀವನವನ್ನು ಕಟ್ಟಿಕೊಟ್ಟಿದ್ದಾರೆ.
ಲೇಖಕ ಎನ್ ಶಂಕರಪ್ಪ ತೋರಣಗಲ್ಲು ಮೂಲತಃ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಗ್ರಾಮದವರು. ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ವಿ.ವಿ.ಯಿಂದ ಸ್ನಾತಕೋತ್ತರ ಪದವೀಧರರು. ವೃತ್ತಿಯಲ್ಲಿ ಸಮಾಲೋಚಕ ಇಂಜಿನಿಯರ್ ಆಗಿದ್ದಾರೆ. ಕೃತಿಗಳು: ಸ್ವಾಮಿ ವಿವೇಕಾನಂದ ; ಕಪ್ಪು ಬಿಳುಪು (ಜನಪ್ರಿಯ ರಾಷ್ಟ್ರೀಯ ನಾಯಕ ವಿವೇಕಾನಂದ ಮತ್ತು ಅಜ್ಞಾತ ಸ್ವಾಮಿ ವಿವೇಕಾನಂದರನ್ನು ಬೇರ್ಪಡಿಸಿ ನೋಡಿದ್ದಾರೆ), ವಿಜ್ಞಾನ- ಏನು? ಹೇಗೆ? , ಸಂಗಂ - ತಮಿಳಗಂ, ಲಿಪಿ ನಿಗೂಢ, ಭಗವದ್ಗೀತೆ ಬೆಳಕು ನೀಡುವುದೇ?, ವಾಸ್ತು ಎಂಬ ವ್ಯಾಧಿ, ತಂತ್ರಜ್ಞಾನದ ದೇಸೀಕರಣ- ಕನ್ನಡದ ಜಾಗತೀಕರಣ, ಹಳಗನ್ನಡ- ಸಂಗಂ ತಮಿಳ್ ಮತ್ತು ಸಂಗಂ ಕಾಲದ ತೀರ್ಮಾನ .ಆರ್ಯರು ಯಾರು ? ...
READ MORE