ಲೇಖಕ ಕೆ. ಎಚ್. ನರಸಿಂಹ ಮೂರ್ತಿ ಅವರು ಬರೆದ ಡಾ. ರಾಜ್ ಕುಮಾರ್ ಅವರ ಜೀವನ ಚರಿತ್ರೆ ಕೃತಿ ʼನಟಸಾರ್ವಭೌಮ ಡಾ. ರಾಜ್‌ಕುಮಾರ್ʼ. ಪುಸ್ತಕದ ಬಗ್ಗೆ ಸ್ವತಃ ಲೇಖಕರೇ ಹೇಳುವಂತೆ, “ಕನ್ನಡ ಚಿತ್ರರಂಗದ ಮಹಾನ್ ನಾಯಕನಟನ ಬದುಕು-ಸಾಧನೆಗಳ ಕುರಿತು ಈ ಪುಸ್ತಕ ಹೇಳುತ್ತದೆ. ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್, ನಮಗೆಲ್ಲ ರಾಜ್‌ಕುಮಾರ್ ಎಂದು ಪರಿಚಿತರು. ಅವರ ಸಮಕಾಲೀನ ಅಭಿಮಾನಿಗಳಿಗೆ ಅವರು ರಾಜಣ್ಣ! ಉಳಿದವರಿಗೆ ಅಣ್ಣಾವ್ರು! 220ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಅವರು ‘ನಟ ಸಾರ್ವಭೌಮ‘ರು! ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಕನ್ನಡಕ್ಕೆ ಮತ್ತೊಂದು ಹೆಸರು ರಾಜ್‍ಕುಮಾರ್! ಅವರಿಗೆ ಸಂದಷ್ಟು ಪ್ರಶಸ್ತಿಗಳು, ಬಿರುದುಗಳು ಸನ್ಮಾನಗಳು ಯಾವ ಕನ್ನಡ ನಟನಿಗೂ ದೊರೆತಿಲ್ಲ. ರಾಜ್‍ಕುಮಾರ್ ಅಭಿಮಾನಿಗಳನ್ನು ‘ಅನ್ನದಾತ‘ರೆಂದು ಕರೆಯುತ್ತಿದ್ದರು. ಗೋಕಾಕ್ ಚಳುವಳಿಗೆ ರಾಜ್‍ಕುಮಾರ್ ತಿರುವನ್ನು ತಂದದ್ದನ್ನು ಹೇಗೆ ತಾನೆ ಮರೆಯಲು ಸಾಧ್ಯ? ರಾಜ್‍ಕುಮಾರ್ ಅವರಂತಹ ಮೇರುನಟ ಯುಗಕ್ಕೊಮ್ಮೆ ಮಾತ್ರ ಘಟಿಸಲು ಸಾಧ್ಯ. ಈ ಪುಟ್ಟ ಕೃತಿ ಅವರನ್ನು ಹೊಸ ರೀತಿಯಲ್ಲಿ ಪರಿಚಯಿಸುತ್ತದೆ” ಎಂದು ಹೇಳಿದ್ದಾರೆ.
ಲೇಖಕ ಕೆ.ಎಚ್. ನರಸಿಂಹಮೂರ್ತಿ ಅವರು ಕನ್ನಡ ಪರ ಹೋರಾಟಗಾರರು. ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾ ವಿಭಾಗದ ಕಾರ್ಯದರ್ಶಿಯಾಗಿದ್ದರು. ಕೃತಿಗಳು: ಸಾಹಿತ್ಯ ಮಲ್ಲ ತರಾಸು, ತಾಯಿನಾಢು, ಪಿ. ರಾಮಯ್ಯ, ಡಾ. ರಾಜಕುಮಾರ, ಆಲೂರು ವೆಂಕಟರಾಯರು ಹೀಗೆ ಕನ್ನಡ ಚಿಂತಕರ ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ...
READ MORE