ಹೊಸ ನೋಟದೊಂದಿಗೆ ಸಾಹಿತ್ಯ ಸೃಷ್ಟಿಗೆ ತಮ್ಮದೇ ಕೊಡುಗೆ ನೀಡಿರುವ ಡಾ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಸಾಹಿತ್ಯ ರಚನೆ-ಹವ್ಯಾಸಗಳು ಇತ್ಯಾದಿ ಆಯಾಮಗಳ ಕುರಿತು ಹತ್ತು ಹಲವು ಕೃತಿಗಳು ರಚನೆಯಾಗಿದ್ದರೂ ಮತ್ತೇ ಮತ್ತೆ ಹೊಸತನದ ಸಂಗತಿ, ವಿದ್ಯಮಾನಗಳ ಬಗ್ಗೆ ಅವರ ವ್ಯಕ್ತಿತ್ವ ಕುತೂಹಲ ಮೂಡಿಸುತ್ತಿವೆ. ಆ ನಿಟ್ಟಿನಲ್ಲಿ, ಲೇಖಕ ಪ್ರಸಾದ ರಕ್ಷಿದಿ ಅವರು ನಮ್ಮ ನಡುವೆ ತೇಜಸ್ವಿ ಎಂಬ ಶೀರ್ಷಿಕೆಯಡಿ ಬರೆದ ಪುಸ್ತಕವಿದು. ತೇಜಸ್ವಿ ಅವರು ಬದುಕಿನಲ್ಲಿಯ ಗಮನಾರ್ಹ, ಕುತೂಹಲಕಾರಿ ಘಟನೆ, ವಿದ್ಯಮಾನಗಳು ಇಲ್ಲಿಯ ವಸ್ತು. ನಿರೂಪಣಾ ಶೈಲಿಯೂ ವಿಶೇಷ. ಆದ್ದರಿಂದ, ಈ ಕೃತಿಯು, ತೇಜಸ್ವಿಯನ್ನು ಅವರ ಬದುಕಿನ ವಿದ್ಯಮಾನಗಳ ಮೂಲಕವೇ ಜೀವಂತವಾಗಿಸಿರುವುದು ವಿಶಿಷ್ಟ.
ಹಾಸನ ಜಿಲ್ಲೆಯ ಸಕಲೇಶಪುರದವರಾದ ಪ್ರಸಾದ ರಕ್ಷಿದಿ ಅವರು ಖ್ಯಾತ ರಂಗಕರ್ಮಿ. ಬಿಎಸ್ಸಿ ಪದವೀಧರ ಆಗಿರುವ ಅವರು ನಾಟಕ ರಚನೆ, ನಟನೆ, ರಂಗ ಸಂಘಟನೆ, ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಮ್ಮ ಎಲುಬುಗಳ ಮೇಲೆ, ಅನಾಮಿಕರು, ಸತ್ಯಕ್ಕೆ ಸಾವಿಲ್ಲ, ಮಾಯಾಮೃಗ, ಪ್ಲಾಂಟರ್ ಪರಮೇಶಿ, ಧನ್ವಂತರಿಯ ಚಿಕಿತ್ಸೆ ಅವರು ನಿರ್ದೇಶಿಸಿದ ನಾಟಕಗಳು. ನಮ್ಮ ನಡುವಿನ ತೇಜಸ್ವಿ ಆಪ್ತವಾದ ವ್ಯಕ್ತಿಚಿತ್ರ. ಬೆಳ್ಳೆಕೆರೆ ಹಳ್ಳೀ ಥೇಟರ್ ಒಂದು ಗ್ರಾಮೀಣ ರಂಗಭೂಮಿಯ ಆತ್ಮೀಯ ಆತ್ಮಕಥನ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಂದ ಸಾಂಸ್ಕೃತಿಕ ಹಾಗೂ ರಂಗ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವ ಅವರು ಜೈ ಕರ್ನಾಟಕ ...
READ MORE