ಗಾಂಧೀಜಿಯವರ ದಂಡಿಯಾತ್ರೆಯಿಂದ ಪ್ರೇರಿತರಾಗಿ, ಮುಂಬಯಿಯಲ್ಲಿ ಉಪ್ಪನ್ನು ತಯಾರಿಸಿ, ಆ ಉಪ್ಪನ್ನು ಮಾರಲು ಹೋಗಿ ಒಂದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ ಪ್ರಥಮ ಭಾರತೀಯ ಮಹಿಳೆ ಕಮಲಾ.
ಗಂಡು ಮತ್ತು ಹೆಣ್ಣು ಸರಿಸಮಾನ ಎಂದು ತಮ್ಮ ಬದುಕಿನ ಉದ್ದಕ್ಕೂ ವಾದಿಸುತ್ತಾ ಬಂದ ಅವರು, ಇಡೀ ಭಾರತದಲ್ಲಿ ಮೊದಲ ಬಾರಿ ಮಹಿಳಾ ಕಾರ್ಮಿಕರ ಸಂಘಟನೆಯನ್ನು ನಡೆಸುತ್ತಾರೆ. 1944ರಷ್ಟು ಹಿಂದೆಯೇ ಭಾರತೀಯ ರಾಷ್ಟ್ರೀಯ ರಂಗಭೂಮಿಯನ್ನು ಕಟ್ಟಿ ಮುಂದೆ “ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ' ಹಾಗೂ 'ಸಂಗೀತ ಮತ್ತು ನಾಟಕ ಅಕಾಡೆಮಿ' ಅಸ್ತಿತ್ವಕ್ಕೆ ಬರಲು ಕಾರಣರಾಗುತ್ತಾರೆ. ಇಂತಹ ಸಾಧಕಿ, ಹೋರಾಟಗಾರ್ತಿ ಕಮಲಾದೇವಿ ಅವರ ಬದುಕು-ಸಾಧನೆಯ ಕುರಿತು ಗೀತಾ ಶೆಣೈ ಅವರು ಈ ಕೃತಿಯಲ್ಲಿ ಪರಿಚಯಿಸಿದ್ದು, ಡಾ. ನಾ. ಸೋಮೇಶ್ವರ ಸಂಪಾದಿಸಿದ್ದಾರೆ.
ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'. ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...
READ MORE