`ರಾಜೇಂದ್ರ ಚೋಳ' ಅವರ ಜೀವನ ಚರಿತ್ರೆಯ ಪುಸ್ತಕವಿದು. ಲೇಖಕ ಕೆ.ಟಿ. ರಾಮಸ್ವಾಮಿ ಅವರು ರಚಿಸಿದ್ದಾರೆ. ಅಪ್ರತಿಮ ವೀರ, ಸಮರ್ಥ ಆಡಳಿತಗಾರ, ಉತ್ತಮ ರಾಜಕಾರಣಿ. ಭಾರತದಲ್ಲಿ ಮಾತ್ರವಲ್ಲದೆ ಭಾರತದಾಚೆ ಸಿಂಹಳ (ಈಗಿನ ಶ್ರೀಲಂಕಾ) ಸುಮಾತ್ರ, ಮಲಯಗಳಲ್ಲಿ ತನ್ನ ಧ್ವಜವನ್ನು ಹಾರಿಸಿದ. ರೈತರೇ ನಾಡಿನ ಬೆನ್ನೆಲುಬು ಎಂದು ಗ್ರಾಮಾಡಳಿತಕ್ಕೆ ಪ್ರಾಧಾನ್ಯತೆ ನೀಡಿದ. ಸಮಾಜದಲ್ಲಿ ಶಾಂತಿ, ಸೌಹಾರ್ದಗಳು ಬೆಳಗುವಂತೆ ರಾಜ್ಯವಾಳಿದ ಎಂದು ಕೃತಿಯ ಕುರಿತಾಗಿ ಇಲ್ಲಿ ವಿವರಿಸಲಾಗಿದೆ. ರಾಜೇಂದ್ರ ಚೋಳನ ರಾಜಕಾರಣದ ಹಿನ್ನೆಲೆ, ಆಡಳಿತ ವೈಖರಿ, ದೇಶಪ್ರೇಮ, ಬಾಲ್ಯ ಜೀವನ, ಕೊನೆಯ ದಿನಗಳು ಹೀಗೆ ಅವನ ಜೀವನದ ವಿವಿಧ ಆಯಾಮಗಳನ್ನು ಲೇಖಕರು ಇಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
ಯುವಲೇಖಕ ಪ್ರಶಾಂತ್ ರಾಮಸ್ವಾಮಿ ಮೂಲತಃ ಕೋಲಾರ ಜಿಲ್ಲೆಯ ವೇಮಗಲ್ ನಲ್ಲಿ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪದವಿ ಶಿಕ್ಷಣ ಪಡೆದರು. ಸದ್ಯ, ಹವ್ಯಾಸಿ ಬರಹಗಾರರು. ಸಮಾನ ಮನಸ್ಕ ಸ್ನೇಹಿತರೊಟ್ಟಿಗೆ ಕೂಡಿ ಪ್ರಕಾಶನ ಸಂಸ್ಥೆಯೊಂದನ್ನು ಕಟ್ಟಿ, ತನ್ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ರೀತಿಯ ವಿಭಿನ್ನ ಯೋಚನೆಗಳ ಕೃತಿಗಳನ್ನು ಪ್ರಕಟಿಸುತ್ತಿದ್ದಾರೆ. ಕೃತಿಗಳು; ಒಂಟಿದಾರಿ (ಕವನ ಸಂಕಲನ), ಆಚಾರ್ಯ ದೇವೋಭವ (ಸಂಪಾದಿತ ಕೃತಿ), ಅಪ್ಪ (ಕಥಾ ಸಂಕಲನ). ...
READ MORE