‘ಸಾತ್ವಿಕ ರಾಜಕಾರಣಿ ತಿಟ್ಟಮಾರನಹಳ್ಳಿ ವಿ.ವೆಂಕಟಪ್ಪ’ ಕೃತಿಯು ಟಿ.ಕೆ. ಕೆಂಪೇಗೌಡ ಅವರ ಒಕ್ಕಲಿಗ ಸಾಧಕರು ಮಾಲಿಕೆಯ ವ್ಯಕ್ತಿ ಪರಿಚಯ ಕೃತಿಯಾಗಿದೆ. ತಿಟ್ಟಮಾರನಹಳ್ಳಿ ವಿ.ವೆಂಕಟಪ್ಪನವರು ಅತ್ಯಂತ ಚಿಕ್ಕವಯಸ್ಸಿನಿಂದಲೇ ಮಾನವೀಯ ಹಾಗೂ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಬೆಳೆದವರು. ವಿದ್ಯಾರ್ಥಿ ದೆಸೆಯಲ್ಲಿಯೇ ಸಾರ್ವಜನಿಕ ಬದುಕಿಗೆ ತಮ್ಮನ್ನು ಅರ್ಪಿಸಿಕೊಂಡ ಅವರು ಸಹಜವಾಗಿಯೇ ಸ್ವಾತಂತ್ಯ್ರ ಹೋರಾಟದ ಅಗ್ನಿದಿವ್ಯಕ್ಕೆ ಒಡ್ಡಿಕೊಂಡು ರಾಜ್ಯಮಟ್ಟದ ನಾಯಕನಾಗಿ ರೂಪುಗೊಂಡರು. ಸದಾ ಚೈತನ್ಯದ ಚಿಲುಮೆಯಂತಿರುತ್ತಿದ್ದ ಸುಂದರಾಕೃತಿಯ ವೆಂಕಟಪ್ಪನವರು ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸ್ಕೌಟ್ ಉಪಾಧ್ಯಾಯ, ಪಟೇಲ, ಪಂಚಾಯಿತಿ ಅಧ್ಯಕ್ಷ, ಪ್ರಜಾಪ್ರತಿನಿಧಿಯ ಸಭೆಯ ಸದಸ್ಯ, ವಿಧಾನಸಭಾ ಸದಸ್ಯ, ಸ್ಪೀಕರ್, ಸಚಿವ, ವಿಧಾನ ಪರಿಷತ್ತಿನ ಸಭಾಪತಿ-ಹೀಗೆ ಕೆಲವು ಹುದ್ದೆಗಳನ್ನು ಅಲಂಕರಿಸಿದ್ದ ಅವರು ಕಿಂಚಿತ್ತೂ ಕಳಂಕ ತಟ್ಟದಂತೆ ಎಚ್ಚರಿಕೆ ಮತ್ತು ಜವಾಬ್ಧಾರಿಯಿಂದ ಬಾಳಿ ಆದರ್ಶವ್ಯಕ್ತಿಯಾಗಿದ್ದವರು. ಸಾಹಿತ್ಯದಲ್ಲೂ ಅಪಾರ ಅಭಿರುಚಿಯಿದ್ದ ವೆಂಕಟಪ್ಪನವರಿಗೆ ಅನೇಕ ಹಿರಿಯ ಲೇಖಕರೊಂದಿಗೆ ಒಡನಾಟವಿತ್ತು.ಕೊಡುಗೈ ದಾನಿಯಾಗಿದ್ದ ವೆಂಕಟಪ್ಪನವರ ಜೀವನದ ಕಥೆಯನ್ನು ಟಿ.ಕೆ ಕೆಂಪೇಗೌಡರು ‘ಸಾತ್ವಿಕ ರಾಜಕಾರಣಿ ತಿಟ್ಟಮಾರನಹಳ್ಳಿ ವಿ. ವೆಂಕಟಪ್ಪ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಹಿರಿಯ ಲೇಖಕ ಕೆ. ಕೆಂಪೇಗೌಡ ಅವರು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಶೆಟ್ಟಿಹಳ್ಳಿಯಲ್ಲಿ ಮಾಧ್ಯಮಿಕ ಶಿಕ್ಷಣ, ಚನ್ನಪಟ್ಟಣದಲ್ಲಿ ಹೈಯರ್ ಸೆಕೆಂಡರಿ ಶಿಕ್ಷಣ ಪಡೆದರು. ಮೈಸೂರು ವಿಶ್ವವಿದ್ಯಾಲಯದಿಂದ ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ (1961), ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ(1965), ಅವರ ಮುಂದಿನ ಸಂಶೋಧನೆ ಮತ್ತು ಗ್ರಂಥರಚನೆಗೆ ಅನುವಾದವು. A Descriptive Analysis of Irula Dialect’ ವಿಷಯ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ 1974ರಲ್ಲಿ ಪಿಎಚ್.ಡಿ.ಪದವಿ ಪಡೆದರು. ಅವರ ‘ಸಾಮಾನ್ಯ ಭಾಷಾ ವಿಜ್ಞಾನ’ ಕೃತಿಗೆ 1995ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಡಿ.ಲಿಟ್.ಪದವಿ ಪಡೆದರು. 1976ರಲ್ಲಿ ...
READ MORE