ವಿಷ್ಣು ನಾರಾಯಣ ಭಾತಖಂಡೆ ಜೀವನಚರಿತ್ರೆ ಪುಸ್ತಕವನ್ನು ಲೇಖಕಿ ಚಂದ್ರಭಾಗದೇವಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಹಿಂದೂಸ್ತಾನೀ ಸಂಗೀತ ಪ್ರಪಂಚದಲ್ಲಿ ಬಹು ದೊಡ್ಡ ಹೆಸರು ಇವರದು. ಸ್ವತಃ ಹಿರಿಯ ಸಂಗೀತಗಾರರು. ಅಗಾಧ ಶ್ರಮದಿಂದ ದೇಶದ ಬೇರೆ ಬೇರೆ ಭಾಗಗಳಿಂದ ಹಾಡುಗಳನ್ನು ಸಂಗ್ರಹಿಸಿದರು; ವಿದ್ವಾಂಸರು ಹಾಡುವ ರೀತಿಯನ್ನು ಅಭ್ಯಾಸ ಮಾಡಿದರು; ನೂರಾರು ವರ್ಷಗಳ ಸಂಗೀತದ ಪರಂಪರೆಯನ್ನು ಅಧ್ಯಯನ ಮಾಡಿದರು. ಹಾಡುಗಾರಿಕೆಗೆ ಶಾಸ್ತ್ರೀಯ ಆಧಾರ ಒದಗಿಸಿದರು. ಸ್ವತಃ ಹಲವು ಅಮೂಲ್ಯ ಗ್ರಂಥಗಳನ್ನು ರಚಿಸಿದರು ಎಂದು ಪುಸ್ತಕದ ಕುರಿತು ಇಲ್ಲಿ ವಿವರಿಸಲಾಗಿದೆ.
ಚಂದ್ರಭಾಗದೇವಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಬಿ.ಎಸ್ಸಿ ಕೆಮಿಸ್ಟ್ರಿ ಪದವೀಧರರು. ಶಿವರಾಮ ಕಾರಂತರಿಂದ ಫ್ರೀಸ್ಟೈಲ್ ನೃತ್ಯಾಭ್ಯಾಸ ತರಬೇತಿ ಪಡೆದವರು. ಬೆಂಗಳೂರಿನಲ್ಲಿ ‘ಮಹಾಮಾಯಾ’ ನಾಟ್ಯ ತರಗತಿಯನ್ನು ಆರಂಭಿಸಿ, ನೂರಾರು ಶಿಷ್ಯರಿಗೆ ನಾಟ್ಯ ತರಬೇತಿ ನೀಡಿರುತ್ತಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಕರಾಚಿಯಲ್ಲಿ ಇಂಡೋ ಪಾಕಿಸ್ತಾನ್ ಮ್ಯೂಸಿಕ ಕಾನ್ ಫಾರೆನ್ಸ್, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಮಾಡರ್ನ್ ಟ್ರೆಂಡ್ ಇನ್ ಭರತನಾಟ್ಯ, ನ್ಯೂಯಾರ್ಕ್‌ನ ಇಂಡೋ ಅಮೇರಿಕನ್ ಡಾನ್ಸ್ ಕಂಪನಿ, ಲಂಡನ್ನಿನ ಏಪಿಯನ್ ಮ್ಯೂಸಿಕಲ್ ಸರ್ಕಲ್, ಸಿಂಗಪೂರ, ಹವಾಯಿ, ಹಾಂಗ್ ಕಾಂಗ್ ಮುಂತಾದೆಡೆ ಉಪನ್ಯಾಸ, ಪ್ರದರ್ಶನಗಳನ್ನು ನೀಡಿರುತ್ತಾರೆ. ಕೃತಿಗಳು : ಗೆಜ್ಜೆಯ ...
READ MORE