`ಮೀರಾಬಾಯಿ' ಈ ಕರತಿಯನ್ನು ಲೇಖಕಿ ಸರಿತಾ ಜ್ಞಾನಾನಂದ ಅವರು ರಚಿಸಿದ್ದಾರೆ. ತನ್ನ ಸರ್ವಸ್ವವನ್ನೂ ’ಗಿರಿಧರ ಗೋಪಾಲ’ನಿಗೆ ಅರ್ಪಿಸಿಕೊಂಡು, ಭಕ್ತಿಯಲ್ಲಿಉನ್ಮತ್ತಳಾದ, ರಾಜಸ್ಥಾನದ ರಾಜವಂಶೀಯಳು, ಶ್ರೀ ಕೃಷ್ಣನ ಭಕ್ತಿಯ ಮಾರ್ಗದಲ್ಲಿ ಸರ್ವ ರೀತಿಯ ಕಷ್ಟಗಳನ್ನೂ ಸಹಿಸಿದ, ವಿಷವನ್ನೇ ಕುಡಿದ ಭಕ್ತಶ್ರೇಷ್ಠೆ. ತನ್ನ ಭಾವಪೂರಿತ ಭಜನೆಗಳಿಂದ ಭಕ್ತಿಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅನುಭಾವ ಮೀರಾಬಾಯಿ, ಅವರ ಜೀವನದ ಮಹತ್ವ ಘಟ್ಟಗಳನ್ನು ಚಿತ್ರಿಸಲಾಗಿದೆ.
ಸರಿತಾ ಜ್ಞಾನಾನಂದ ಅವರು ಮೂಲತಃ ಬೆಂಗಳೂರಿನವರು. ತಂದೆ- ಎನ್. ಆರ್. ನಂಜುಂಡಸ್ವಾಮಿ, ತಾಯಿ- ಸುಬ್ಬಮ್ಮ. 21-01-1943ರಲ್ಲಿ ಜನಿಸಿದ ಅವರು ಅಧ್ಯಾಪಕ ವೃತ್ತಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸರಿತಾ ಜ್ಞಾನಾನಂದ ಅವರು ಒಂದೂರಲ್ಲಿ ಒಬ್ಬ ನಿರ್ಮಲಾ, ಪರಿಪೂರ್ಣ, ತನ್ನ ಮೀನು-ತಾನಾದ, ಬೆಂಕಿ ಹೂ, ಪಾಕಿಸ್ತಾನದಲ್ಲಿ ಶಂಕರ್ ಎಂಬ ಕಾದಂಬರಿಗಳನ್ನು ರಚಿಸಿದ್ದಾರೆ. ಅನುವಾದ ಕ್ಷೇತ್ರದಲ್ಲಿಯೂ ಕೃಷಿ ಮಾಡಿರುವ ಅವರು ವಿದಾಯ, ವಿಷಗರ್ಭ, ಪ್ರಕೃತಿ ಸಂಶೋಧನೆ ಸೇರಿದಂತೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ. ಜೊತೆಗೆ ಹೆಣ್ಣೆ ಹೆಚ್ಚು ಎಂಬ ನಾಟಕನ್ನು ರಚಿಸಿರುವ ಅವರು ಆಚಾರ್ಯಾಭಿವಂದನೆ, ಕಲಾರಾಧನೆ ...
READ MORE