ಸಾಮಾಜಿಕ ಹೋರಾಟಗಾರ ಡಬ್ಲ್ಯೂ.ಎಚ್.ಹನುಮಂತಪ್ಪ

Author : ಎಂ. ಎಚ್. ನಾಗರಾಜು

Pages 200

₹ 186.00




Year of Publication: 2021
Published by: ವಿಕಸನ ಪ್ರಕಾಶನ
Address: ವಿಜ್ಞಾತಂ ಭವನ, ಆದಿಚುಂಚನಗಿರಿ ವಿಶ್ವವಿದ್ಯಾನಿಲಯ, ಬಿ.ಜಿ. ನಗರ- 571448, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ
Phone: 9481908555

Synopsys

`ಸಾಮಾಜಿಕ ಹೋರಾಟಗಾರ ಡಬ್ಲ್ಯೂ.ಎಚ್.ಹನುಮಂತಪ್ಪ ‘ ಕೃತಿಯು ಎಂ. ಎಚ್. ನಾಗರಾಜು ಅವರ ಒಕ್ಕಲಿಗ ಸಾಧಕರು ಮಾಲಿಕೆಯ ವ್ಯಕ್ತಿ ಪರಿಚಯ ಕೃತಿಯಾಗಿದೆ. ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ‘ಮರೆಯಲಾಗದ ಮಹಾನುಭಾವರು' ಕೃತಿಯು ಮೂವರು ಕಲಾಸಾಧಕರ ನುಡಿತೋರಣ ಜೀವನ ಕಥನ ಕೀರ್ತನಶಿರೋಮಣಿ ಗಂಗನಘಟ್ಟದ ರಂಗದಾಸರು, ಮೂಡಲಪಾಯ ಯಕ್ಷಗಾನಕೋಗಿಲೆ ಪಟೇಲ್ ನಾರಸಪ್ಪ ಮತ್ತು ಮೂಡಲಪಾಯ ಯಕ್ಷಗಾನದ ಮಹಾಪೋಷಕ ಚಿ. ನಂಜುಂಡಪ್ಪ ಇವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆ ಸಲ್ಲಸಿ, ಕೀರ್ತಿ ಪಡೆದವರು ಗ್ರಾಮೀಣ ಪ್ರದೇಶದಲ್ಲಿ ಕಲಾಸೇವೆ, ಜನಮನ್ನಣೆ ಪಡೆಯುವುದು ಸುಲಭದ ಮಾತಲ್ಲ ಆದರೂ ಹಲಕಥೆ ರಂಗದಾಸರು, ಯಕ್ಷಗಾನದ ಭಾಗವತ ಪಟೇಲ್ ನಾರಸಪ್ಪನವರು ಹಾಗೂ ಕಲಾವಿದರೂ ಜನಪದಕಲಾ ಪೋಷಕರಾದ ಚಿ. ನಂಜುಂಡಪ್ಪನವರನ್ನು ಇಂದಿಗೂ ಜನರು ಸ್ಕಲಿಸುತ್ತಾರೆ. ಈ ಕಲಾವಿದರ ಜೀವನ ಚಿತ್ರಣವನ್ನು ಅತ್ಯಂತ ಪರಿಶ್ರಮದಿಂದ ಕ್ಷೇತ್ರಕಾರ್ಯ ಮಾಡಿ ಮಾಹಿತಿ ಸಂಗ್ರಹಿಸಿ 'ಮರೆಯಲಾಗದ ಮಹಾನುಭಾವರು' ಕೃತಿ ರಚಿಸಿರುವ ಪ್ರೊ. ಕೆ. ಪುಟ್ಟರಂಗಪ್ಪನವರು ಅಭಿನಂದನಾರ್ಹರು ಎಂದಿದೆ.

About the Author

ಎಂ. ಎಚ್. ನಾಗರಾಜು

ಎಂ. ಎಚ್. ನಾಗರಾಜು ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮರಳೇನಹಳ್ಳಿಯವರು. ಮರಳೇನಹಳ್ಳಿ, ದೊಡ್ಡಬಳ್ಳಾಪುರ, ಬೆಂಗಳೂರುಗಳಲ್ಲಿ ಶಿಕ್ಷಣ ಪೂರೈಸಿ, ರಾಜ್ಯದ ವಿವಿಧ ಪದವಿ ಪೂರ್ವ ಕಾಲೇಜುಗಳಲ್ಲಿ ಇತಿಹಾಸ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸದ್ಯ ನಿವೃತ್ತರು. ತುಮಕೂರಲ್ಲಿ ವಾಸವಾಗಿದ್ದಾರೆ. ಏಕಕಾಲದಲ್ಲಿ ಇತಿಹಾಸ-ಸಾಹಿತ್ಯ ಸಮ್ಮಿಲನ, ಜೊತೆಯಲ್ಲಿ ಗಾಂಧಿ, ಅಂಬೇಡ್ಕರ್, ಬಸವ, ಬುದ್ಧರ ಚಿಂತನೆಗಳನ್ನು ಸಮಗ್ರೀಕರಿಸಿದ ರೀತಿಯಲ್ಲಿ ಇವರ ಬರಹಗಳಿವೆ. ಕೃತಿಗಳು :  ಒಕ್ಕಲಿಗರು ಮತ್ತು ಪರಭೇದಗಳು, ಕುಂಚಿಟಿಗರ ಒಕ್ಕಲಿಗರವಲ್ಲವೇ?’, ಮರೆಯಲಾಗದ ಮಾಲಿಮರಿಯಪ್ಪ, ‘ಸಾಧನೆಯ ಹಾದಿಯಲ್ಲಿ ಬಿ.ರಂಗಣ್ಣ’, ‘ಫೌಜುದಾರ್ ಬೋರೇಗೌಡ, ‘ಗುಬ್ಬಿಹೊಸಹಳ್ಳಿ ಪ್ರಭುಗಳು, ‘ಧರ್ಮಪ್ರಕಾಶನ ಡಿ. ಬನುಮಯ್ಯ’, ‘ಸಾಮಾಜಿಕ ಹೋರಾಟಗಾರ W.H ಹನುಮಂತಪ್ಪ ...

READ MORE

Related Books