‘ಬೆಂಕಿಯಲ್ಲಿ ಅರಳಿದ ಹೂವು’ ಸಮಾಜ ಸೇವಕ ರವಿ ಕಕ್ಯಪದವುರವರು ಯಶೋಗಾಥೆ. ಈ ಕೃತಿಯನ್ನು ಡಾ. ರಾಜೇಶ್ವರಿ ಗೌತಮ್ ರಚಿಸಿದ್ದಾರೆ. ಕೃತಿಗೆ ಜೇಸಿಐ ಸುಬ್ರಹ್ಮಣ್ಯ ಕುಕ್ಕೇಶ್ರೀ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ವಿಶ್ವನಾಥ ನಡುತೋಟ ಅವರು ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ತಿಳಿಸುತ್ತಾ, ‘ಕುಮಾರ ಪರ್ವತ ಶ್ರೇಣಿಯ ತಪ್ಪಲಲ್ಲಿರುವ ಕುಮಾರಧಾರಾ ನದಿಯ ತಟದಲ್ಲಿ ನೆಲೆನಿಂತು ಭಕ್ತರನ್ನು ಹರಸುತ್ತಿರುವ ಕುಮಾರಸ್ವಾಮಿ ಇಂದು ಪ್ರಪಂಚದಾದ್ಯಂತ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿರುವುದು ಸರ್ವೇದ, ಇಂತಹ ಮಾಹಕ್ಕೆ ದೂರದ ಕಕ್ಯಪದವಿನಿಂದ ಬಂದು ಮೊದಲು ಜನಸೇವೆಯೇ ಈಶ ಸೇವೆ ಎಂದು ಆರಂಭಿಸಿ ಎಲ್ಲರ ಪರಿಚಯಸ್ಥರಾಗಿ ಒಡನಾಡಿಯಾಗಿ ಜನಾನುರಾಗಿ ಅಂತರಾಷ್ಟ್ರೀಯ ಜೇಸಿಐ ಸಂಸ್ಥೆಗೆ ಪಾದಾರ್ಪಣೆ ಮಾಡಿ ಇಂದು ರಾಜ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಶೂನ್ಯದಿಂದ ಬೆಳಕಿನೆಡೆಗೆ ಯಶಸ್ಸಿನೆಡೆಗೆ ಬಂದವರೇ ರವಿ ಕಕ್ಯಪದವುರವರು. ಇಂತಹ ಓರ್ವ ಜನಸೇವಕನ ಜೀವನದ ಯಶೋಗಾಥೆಯನ್ನು ಸವಿಸ್ತಾರವಾಗಿ, ಎಳೆಎಳೆಯಾಗಿ ವಿಷಯ ಸಂಗ್ರಹಿಸಿ ಕಿರು ಹೊತ್ತಿಗೆಯನ್ನು ತರುವಲ್ಲಿ ಉದಯೋನ್ಮುಖ ಲೇಖಕಿ ಶ್ರೀಮತಿ ಡಾ. ರಾಜೇಶ್ವರಿಯವರ ಪ್ರಯತ್ನ ನಿಜಕ್ಕೂ ಹೆಮ್ಮೆಪಡುವಂತಹದು. ತಾನೋರ್ವ ವೈದ್ಯೆಯಾಗಿ ಚಿಕ್ಕಂದಿನಿಂದಲೇ ಓದುವ, ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಲು ತಂದೆ - ತಾಯಿಯ ಪ್ರೇರಣೆ ಪ್ರಮುಖವಾಗಿ ಕಾಣುತ್ತದೆ. ತಾಯಿ ಭುವನೇಶ್ವರಿ ಅವರು ಅಧ್ಯಾಪಕಿ ವೃತ್ತಿಯೊಂದಿಗೆ ಕಥೆ, ಕವನದ ಕಡೆ ಹೆಚ್ಚು ಒಲವು ಹೊಂದಿದವರು. ತಂದೆ ಮೇದಪ್ಪ ಮಾಸ್ತರ್ ಮೇರ್ಕಜೆಯವರು ಮಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಹುರಿದುಂಬಿಸುವ ಪ್ರವೃತ್ತಿ ಹೊಂದಿದವರು. ಇದರೊಂದಿಗೆ ರಾಜೇಶ್ವರಿ ಅವರ ಪತಿ ಡಾ. ಗೌತಮ್‌ರವರ ನಿರಂತರ ಪ್ರೋತ್ಸಾಹದೊಂದಿಗೆ ಸಮಾಜಕ್ಕೆ ಶೂನ್ಯದಿಂದ ಯಶಸ್ಸಿನೆಡೆಗೆ ಸಾಗುವ ಓರ್ವ ಜನಸೇವಕನ ಜೀವನ ಚರಿತ್ರೆಯನ್ನು ಪರಿಚಯಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುವರು.
ಡಾ. ರಾಜೇಶ್ವರಿ ಗೌತಮ್ ಅವರು ಪ್ರಾಥಮಿಕ ಶಿಕ್ಷಣವನ್ನು ಸ.ಮಾ.ಹಿ.ಪ್ರಾ.ಶಾಲೆ ಸುಬ್ರಹ್ಮಣ್ಯ ದಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಸುಬ್ರಹ್ಮಣ್ಯ ಪೂರ್ಣಗೊಳಿಸಿದ್ದಾರೆ. ಆನಂತರದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ನೆಹರು ಮೆಮೋರಿಯಲ್ ಕಾಲೇಜು ಸುಬ್ರಹ್ಮಣ್ಯ , ಕೆ. ವಿ. ಜಿ. ಡೆಂಟಲ್ ಕಾಲೇಜು ಸುಳ್ಯ ದಲ್ಲಿ ಬಿ. ಡಿ. ಎಸ್ ಪೂರ್ಣಗೊಳಿಸಿ ದಂತ ವೈದ್ಯ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈದ್ಯ ವೃತ್ತಿಯ ಜೊತೆಗೆ ಸಾಹಿತ್ಯದ ಒಲವಿರುವ ಅವರು ಲೇಖನ, ಕಥೆಗಳನ್ನು ಬರೆಯುತ್ತಾರೆ. ಅಲ್ಲದೆ ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮಗಳಲ್ಲಿ ಭಾಷಣಕಾರರಾಗಿಯೂ ಭಾಗವಹಿಸುತ್ತಾರೆ. ...
READ MORE