ಲೇಖಕ ಅನಂತ್ ಪೈ ಅವರ ಪೌರಾಣಿಕ ಕೃತಿ ʻಕರ್ಣʼ. ಪುಸ್ತಕದ ಶೀರ್ಷಿಕೆಯೇ ಸೂಚಿಸುವಂತೆ ಇದು ಕೆಚ್ಚೆದೆಯ, ಉದಾರ ಮನಸ್ಸಿನ, ದುರದೃಷ್ಟವಂತ ರಾಜಕುಮಾರನಾದ ಕರ್ಣನ ಬಗ್ಗೆ ಹೇಳುತ್ತದೆ. ಮಹಾಭಾರತದಲ್ಲಿ ಕರ್ಣನು ಖಳನಾಯಕ. ದುರ್ಯೋಧನನ ಆಪ್ತ ಮಿತ್ರನಾಗಿ ಕಾಣಿಸಿಕೊಳ್ಳುವ ಒಂದು ಪ್ರಮುಖವಾದ ಪಾತ್ರವಾಗಿದೆ. ಮಹಾಭಾರತದುದ್ದಕ್ಕೂ ತ್ಯಾಗ, ಮಿತ್ರ ಪ್ರೇಮ, ದಾನ ಈ ಎಲ್ಲದಕ್ಕೂ ಮಾದರಿಯಾಗಿ ನಿಲ್ಲುತ್ತದೆ. ಹಾಗೂ ಇವನು ʻದಾನ ವೀರ ಶೂರ ಕರ್ಣʼ ಎಂದೇ ಹೆಸರಾದವನು. ಸೂರ್ಯಮಂತ್ರದಿಂದ ಮದುವೆಗೆ ಮುನ್ನವೇ ಕುಂತಿಯಲ್ಲಿ ಜನಿಸಿದ ಕರ್ಣನು ಪಾಂಡವರ ಹಿರಿಯ ಅಣ್ಣ.
ಅನಂತ ಪೈ ಅವರ ಪೂರ್ಣ ಹೆಸರು-ಕಾರ್ಕಳ ವೆಂಕಟ್ರಾಯ ಅನಂತ್ ಪೈ. ಕಾರ್ಕಳದಲ್ಲಿ 17-09-1929ರಂದು ಜನನ. ತಂದೆ ವೆಂಕಟ್ರಾಯ, ತಾಯಿ ಸುಶೀಲಾ. ಮಗು ಎರಡು ವರ್ಷವಿದ್ದಾಗ ತಂದೆ-ತಾಯಿ ತೀರಿಕೊಂಡರು. ಸಂಬಂಧಿಕರ ಸಹಕಾರದಲ್ಲಿ ಬೆಳೆದರು. ಮುಂಬೈನ ಮಾಹಿಮ್ ಓರಿಯೆಂಟಲ್ ಶಾಲೆಯಲ್ಲಿ ಶಿಕ್ಷಣ ನಂತರ ಮುಂಬೈ ವಿ.ವಿ.ಯಿಂದ ಕೆಮಿಕಲ್ ಟೆಕ್ನಾಲಜಿಯಲ್ಲಿ ಎರಡು ಪದವಿ ಪಡೆದರು. ಅಂಕಲ್ ಪೈ ಎಂದೇ ವಿಶ್ವಖ್ಯಾತಿ. ವ್ಯಂಗ್ಯ ಚಿತ್ರಗಳು ಅಷ್ಟೇನೂ ಹೆಸರುಮಾಡಿರದ ಕಾಲದಲ್ಲಿ 'ಅನಂತ ಪೈ'ರವರು ಮಕ್ಕಳ ಮನಸ್ಸಿಗೆ ನಾಟುವಂತೆ ಸೃಷ್ಟಿಸಿದ ಕಥಾಚಿತ್ರಗಳು, ಅವರ ಕಥೆಯನ್ನು ಹೇಳುವ ಕೌಶಲ್ಯಕ್ಕೆ ಸಾಕ್ಷಿಯಾಗಿವೆ. ಮಕ್ಕಳ ಸುಸುಪ್ತ ಚೇತನವನ್ನು ಹುರಿಗೊಳಿಸಿ ಅತ್ಯಂತ ...
READ MORE