ಗೆಳೆಯ ಶಿವಾಜಿ

Author : ಅಶೋಕ್

Pages 128

₹ 200.00




Year of Publication: 2022
Published by: ಬಿ ಕಲ್ಚರ್

Synopsys

ಗೆಳೆಯ ಶಿವಾಜಿ ಅಶೋಕ್‌ ಅವರ ಕೃತಿಯಾಗಿದೆ. ಹಿರಿಯ ನಟ ಅಶೋಕ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಆತ್ಮೀಯ ಸ್ನೇಹಿತರು. ರಜನಿ ಬಗ್ಗೆ ಯಾರಾದರೂ ವಸ್ತುನಿಷ್ಠವಾಗಿ ಬರೆಯಬಲ್ಲರು ಅಂದರೆ, ಅದು ಅಶೋಕ್ ಅವರಿಗೆ ಮಾತ್ರ ಸಾಧ್ಯವಾಗುವಂಥದ್ದು. ರಜನಿ ಅವರ ಕಷ್ಟದ ದಿನಗಳಿಂದ ಸೂಪರ್ ಸ್ಟಾರ್ ಆಗಿ ಬೆಳೆದ ಪರಿಯನ್ನು ಕಣ್ಣಾರೆ ಕಂಡವರು. ಕಂಡುಂಡು ಮೆರೆದವರು. ಹಾಗಾಗಿ ಗೆಳೆಯನ ಜೊತೆಗಿನ ಅಪರೂಪದ ಭಾವನೆಗಳನ್ನು ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ ಅಶೋಕ್.

About the Author

ಅಶೋಕ್
(12 September 1951)

ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಿರಿಯ ನಟ ಅಶೋಕ್ ಬೆಂಗಳೂರಿನ ಆನೇಕಲ್ ಮೂಲದವರು. (ಜನನ: 1951 ಸೆಪ್ಟೆಂಬರ್ 12ರಂದು) ತಂದೆ ಲಕ್ಷ್ಮಿ ನರಸಿಂಹಯ್ಯ, ತಾಯಿ ಪುಟ್ಟಮ್ಮ. ತಮ್ಮ ಕಲಾತ್ಮಕ ಪಾತ್ರಗಳಿಗೆ ಅಶೋಕ್ ಅವರು  ಹೆಸರಾಗಿದ್ದು ಮಾತ್ರವಲ್ಲದೆ ಹಲವು ಸಮಾಜಪರ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಪದವಿ ಮುಗಿದ ನಂತರ ಮದ್ರಾಸ್ ಇನ್‌ಸ್ಟಿಟ್ಯೂಟ್ ಗೆ ಸೇರಿ, ನಟನಾ ತರಬೇತಿ ಪಡೆದರು. `ಹೆಣ್ಣು ಸಂಸಾರದ ಕಣ್ಣು' ಚಿತ್ರದಿಂದ ನಟನೆ ಆರಂಭಿಸಿ, ಸನಾದಿ ಅಪ್ಪಣ್ಣ,ರಂಗನಾಯಕಿ,ಚೆಲ್ಲಿದ ರಕ್ತ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಕರ್ನಾಟಕ ಚಲನಚಿತ್ರ ಕಲಾವಿದ ಮತ್ತು ಕಾರ್ಮಿಕ ವರ್ಗದ ನಾಯಕರಾಗಿಯೂ ಪ್ರಸ್ತುತರಾಗಿದ್ದಾರೆ.. ನಟನೆಯ ಜೊತೆಗೆ ಈಗ ಬರವಣಿಗೆಯಲ್ಲೂ ...

READ MORE

Related Books