ಭಾರತೀಯ ಸಾಹಿತ್ಯ ನಿರ್ಮಾಣಕಾರರ ಮಾಲೆಯಡಿ ಸಾಹಿತ್ಯ ಅಕಾಡೆಮಿಯು ಸಂಸ್ಕೃತ ಕವಿ ಬಾಣಭಟ್ಟನ ಕುರಿತ ಜೀವನ ಚರಿತ್ರೆ ಪ್ರಕಟಿಸಿದ್ದು, ಈ ಕೃತಿಯನ್ನು ಡಾ. ಕೆ.ಕೃಷ್ಣಮೂರ್ತಿ ಅವರು ಇಂಗ್ಲಿಷಿನಲ್ಲಿ ಬರೆದಿದ್ದನ್ನೇ ಕನ್ನಡಕ್ಕೂ ಅನುವಾದಿಸಿದ್ದಾರೆ. ಬಾಣಭಟ್ಟನ ಕವಿತಾ ಶಕ್ತಿಯನ್ನು ಕೇವಲ ಕಾಳಿದಾಸನೊಂದಿಗೆ ಮಾತ್ರ ಹೋಲಿಕೆಗೆ ಸರಿಗಟ್ಟುವಂತಹದ್ದು. ಭಾರತೀಯ ವೈವಿಧ್ಯಮಯ ಸಾಹಿತ್ಯದ ಮೇಲೆ ಬಾಣಭಟ್ಟನ ಪ್ರಭಾವವನ್ನು ತಳ್ಳಿ ಹಾಕುವಂತೆಯೇ ಇಲ್ಲ. ಬಾಣ: ಅವನ ಜೀವನ ಹಾಗೂ ಕೃತಿಗಳು, ಕಾವ್ಯಕಲೆಯ ಬಗೆಗೆ ಬಾಣನ ವಿಚಾರಗಳು, ಚಂಡೀಶತಕ, ಹರ್ಷ ಚರಿತೆ, ಕಾದಂಬರಿ, ಬಾಣನ ಶೈಲಿ ಹೀಗೆ ವಿವಿಧ ಅಧ್ಯಾಯಗಳ ಮೂಲಕ ಬಾಣನ ವ್ಯಕ್ತಿತ್ವ ಹಾಗೂ ಆತನ ಸಾಹಿತ್ಯಕ ಸಾಧನೆಯನ್ನು ಸಮಗ್ರವಾಗಿ ಕಟ್ಟಿಕೊಡಲಾಗಿದೆ.
ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...
READ MORE