`ಸುಭಾಷ್ ಚಂದ್ರ ಬೋಸ್' ಅವರ ಜೀವನ ಚರಿತ್ರೆಯ ಕೃತಿ ಇದು. ಲೇಖಕ ತಿ.ತಾ. ಶರ್ಮ ಅವರು ರಚಿಸಿದ್ದಾರೆ. ಭಾರತದ ಸ್ವಾತಂತ್ರಕ್ಕಾಗಿ ಹಗಲಿರುಳೂ ಶ್ರಮಿಸಿ ’ನೇತಾಜಿ’ ಎಂದು ಪ್ರಿಯರಾಗಿರುವ ನಾಯಕಾಗ್ರಣಿ; ದೇಶದ ಹೊರಗೆ ಹೋಗಿ ಭಾರತೀಯರ ಸೈನ್ಯವನ್ನೇ ಕಟ್ಟಿ ಪ್ರಚಂಡ ಬ್ರಿಟಿಷ್ ಶಕ್ತಿಗೇ ಸವಾಲೆಸಗಿದ ಧೀರ ಎಂದು ಸುಭಾಷ್ ಚಂದ್ರ ಬೋಸ್ ಅವರ ಕುರಿತಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಸುಭಾಷ್ ಚಂದ್ರ ಬೋಸ್ ಅವರ ಬಾಲ್ಯ ಜೀವನ, ಬ್ರಿಟಿಷರ ವಿರುದ್ಧ ಹೋರಾಡಿದ ಪರಿ, ಸಂಘಟನೆಗಳ ಸ್ಥಾಪನೆ, ನೇತಾಜಿ ಹೆಸರಿನ ಹಿಂದಿನ ಇತಿಹಾಸ, ಸಂಗ್ರಾಮದ ದಿನಗಳು, ಸೆರೆಮನೆ ವಾಸ ಹೀಗೆ ಅವರ ಜೀವನದ ವಿವಿಧ ಘಟ್ಟಗಳನ್ನು ಲೇಖಕರು ಅಚ್ಚುಕಟ್ಟಾಗಿ ವಿವರಿಸಿದ್ದಾರೆ.
ಸಾಹಿತಿ, ಪತ್ರಕರ್ತ ತಿ.ತಾ. ಶರ್ಮ ಎಂತಲೇ ಪರಿಚಿತರಾಗಿರುವ ತಿರುಮಲೆ ತಾತಾಚಾರ್ಯ ಶರ್ಮ ಅವರು ಕನ್ನಡ ಸಾಹಿತ್ಯ ಹಾಗೂ ಪತ್ರಿಕಾರಂಗದಲ್ಲಿ ತನ್ನದೇ ಛಾಪು ಮೂಡಿಸಿದವರು. ಇವರು 1897 ಏಪ್ರಿಲ್ 27ರಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನಿಸಿದರು. ತಾಯಿ ಜಾನಕಿಯಮ್ಮ, ತಂದೆ ಶ್ರೀನಿವಾಸ ತಾತಾಚಾರ್ಯ. ಹುಟ್ಟೂರು ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಪಡೆದರು. ಸ್ವಾತಂತ್ಯ್ರ ಚಳವಳಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಪತ್ರಕರ್ತರಾಗಿ ಉದ್ಯೋಗ ಆರಂಭಿಸಿದರು. ಭಾರತಿ ಕಾವ್ಯನಾಮದ ಮೂಲಕ ಹೆಸರಾಗಿದ್ದ ತಿರುಮಲೆ ರಾಜಮ್ಮ ಅವರು ಇವರ ಬಾಳಸಂಗಾತಿ. ಶಾಸನಗಳಲ್ಲಿ ಕಂಡುಬರುವ ಕನ್ನಡ ಕವಿಗಳು ಶರ್ಮ ಅವರ ಮೊದಲ ಕೃತಿಯಾಗಿದೆ. ಸಾಹಿತ್ಯ ಕೃಷಿಯಲ್ಲಿಯೂ ...
READ MORE