ಕರ್ನಾಟಕದ ಏಕೀಕರಣ ಹಾಗೂ ನಾಡು ನುಡಿಗೆ ಶ್ರೀಗಂಧದ ಕೊರಡಿನಂತೆ ಜೀವ ತೇಯ್ದ ಪ್ರಾತಃಸ್ಮರಣೀಯ ಹಿರಿಯ ಚೇತನಗಳಲ್ಲಿ ಕಂಬಳಿ ಸಿದ್ದಪ್ಪ ಅವರನ್ನು ವಿವರಿಸಿದ್ದಾರೆ. ಕಂಬಳಿ ಸಿದ್ದಪ್ಪನವರು ಹುಬ್ಬಳ್ಳಿಯಲ್ಲಿ ಜನಿಸಿ ತಮ್ಮ ಬಾಳಿನುದ್ದಕ್ಕೂ ದಿವ್ಯ ಬದುಕನ್ನು ನಡೆಸಿ, ಕರ್ನಾಟಕ ಸಂಸ್ಕೃತಿಯನ್ನು ಮತ್ತು ನಾಡು ನುಡಿಯನ್ನು ಉಜ್ವಲಗೊಳಿಸಿದವರು. ಚಿಕ್ಕಂದಿನಿಂದಲೂ ಜೀವನಕ್ಕಾಗಿ ಹೋರಾಟವನ್ನೇ ಅವಲಂಬಿಸಬೇಕಾಗಿ ಬಂದ ಕಂಬಳಿಯವರು ವಕೀಲರಾಗಿ, ಧ್ಯೇಯ, ನಿಷ್ಠೆಗಳಿಂದ ಮತ್ತು ಸಂಘಟನಾ ಬಲದಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಇವರ ಕುರಿತು ಈ ಕೃತಿಯು ಚಿತ್ರಣ ನೀಡಿದೆ.