ಸಮಾಜವಾದಿ ಎಸ್. ಬಂಗಾರಪ್ಪ- ಡಾ. ಚಿ.ಸಿ. ನಿಂಗಣ್ಣ ಅವರ ಕೃತಿ. ಸಾರೆಕೊಪ್ಪ ಬಂಗಾರಪ್ಪ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು. ಸಮಾಜವಾದಿ ಹಿನ್ನೆಲೆಯಿಂದ ಬಂದ ಅವರು ರೈತ ಪರ ಹಾಗೂ ಸಮಾಜಿಕ ಅಸಮಾನತೆಯ ವಿರುದ್ಧ ಹೋರಾಟಗಳನ್ನು ಮಾಡುತ್ತಲೇ, ಲೋಹಿಯಾ ಹಾಗೂ ಗೋಪಾಲಗೌಡರ ವಿಚಾರಗಳ ಅನುಯಾಯಿಯಾಗಿದ್ದರು. ಇಂತಹ ವ್ಯಕ್ತಿತ್ವವನ್ನು, ಅವರ ಜೀವನದ ವಿವಿಧ ಆಯಾಮಗಳನ್ನು, ಸಾಮಾಜಿಕ ಕಳಕಳಿಯನ್ನು ಚಿತ್ರಿಸುವ ಕೃತಿ ಇದು.
ಲೇಖಕ ಡಾ. ಸಿ. ಚಿ. ನಿಂಗಣ್ಣ ಅವರು ಮೂಲತಃ ಕಲಬುರಗಿಯವರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಚೆಯಲ್ಲಿ ಪಡೆದರು. “ಕಲಬುರಗಿ ಜಿಲ್ಲೆಯ ಜಾತ್ರೆಗಳು ಒಂದು ಜಾನಪದೀಯ ಅಧ್ಯಯನ” ವಿಷಯವಾಗಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧ ಸಲ್ಲಿಸಿ, ಪಿಎಚ್ ಡಿ ಪಡೆದರು. ಸದ್ಯ, ಕಲಬುರಗಿಯ ಸಂತ ಜೋಸೆಫ್ ಪಿ.ಯು. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ಕ.ಸಾ.ಪ. ಸಾಹಿತ್ಯ ಸಂಚಾಲಕರಾಗಿದ್ದು, ವಚನಸಾಹಿತ್ಯ, ಜಾನಪದ ಹಾಗೂ ವಿಮರ್ಶೆ ವಲಯದಲ್ಲಿ ವಿಶೇಷ ಆಸಕ್ತಿ. ಕೃತಿಗಳು: ಕಲಬುರಗಿ ಜಿಲ್ಲೆಯ ಜಾತ್ರೆಗಳು ಒಂದು ಜಾನಪದೀಯ ಅಧ್ಯಯನ (ಮಹಾಪ್ರಬಂಧ) ಕನ್ನಡ ವ್ಯಾಕರಣ, ಬಡವರ ಬಂಗಾರ, ಶಿವಾಜಿ, ಹಬ್ಬಗಳು, ಸ್ಪಂದನ, ಬಸವಣ್ಣನವರ ವಚನಗಳಲ್ಲಿ ಸಮಾಜೋಧಾರ್ಮಿಕ ಪ್ರಜ್ಞೆ ...
READ MORE