ಸರ್ದಾರ್ ವಲ್ಲಭಭಾಯ್ ಪಟೇಲ್

Author : ವೈ.ಜಿ.ಮುರಳೀಧರನ್

Pages 48

₹ 27.00




Year of Publication: 2015
Published by: ನವಕರ್ನಾಟಕ ಪಬ್ಲೀಕೇಷನ್‌
Address: ಕ್ರೆಸೆಂಟ್‌ ರೋಡ್‌, ಕುಮಾರ ಪಾರ್ಕ್, ಬೆಂಗಳೂರು 560001
Phone: 7353530805

Synopsys

ವಲ್ಲಭಬಾಯ್ ಪಟೇಲ್ ಜೀವನಚರಿತ್ರೆಯು ವೈ.ಜಿ.ಮುರಳೀಧರನ್‌ ಅವರ ಕೃತಿಯಾಗಿದೆ. ವಲ್ಲಭಬಾಯ್ ಪಟೇಲ್ ಅವರನ್ನು ‘ಸರ್ದಾರ್‘, ‘ಉಕ್ಕಿನ ಮನುಷ್ಯ‘ ಎಂದು ಕರೆದರು. ‘ಭಾರತದ ಬಿಸ್ಮಾರ್ಕ್‘ ಎಂದು ಪ್ರಶಂಸಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಬ್ರಿಟಿಷ್ ಭಾರತದ ಜೊತೆಯಲ್ಲಿ 565 ಚಿಕ್ಕಪುಟ್ಟ ಸಂಸ್ಥಾನಗಳಿದ್ದವು. ಈ ಸಂಸ್ಥಾನಗಳು ಭಾರತದ ಜೊತೆ, ಪಾಕಿಸ್ತಾನದ ಜೊತೆಯಲ್ಲಿ ಸೇರಬಹುದಿತ್ತು ಅಥವಾ ಸ್ವತಂತ್ರವಾಗಿ ಉಳಿಯಬಹುದಿತ್ತು. ಗಾಂಧೀಜಿಯವರಿಗೆ ಈ ಎಲ್ಲ ಸಂಸ್ಥಾನಗಳನ್ನು ಭಾರತದೊಡನೆ ಸೇರುವಂತೆ ಹಿತನುಡಿಯನ್ನು ಹೇಳುವ ಸಾಮರ್ಥ್ಯ ಕೇವಲ ಪಟೇಲರಿಗಿದೆ ಎಂದೆನಿಸಿತು. ಪಟೇಲರು ಸಾಮ, ದಾನ, ಭೇದ ದಂಡಗಳನ್ನು ಸಮಯೋಚಿತವಾಗಿ ಬಳಸಿ ಎಲ್ಲರೂ ಭಾರತ ಒಕ್ಕೂಟದಲ್ಲಿ ವಿಲೀನವಾಗುವಂತೆ ನೋಡಿಕೊಂಡದ್ದು ಅದ್ವಿತೀಯ ಸಾಧನೆ ಎಂದು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

About the Author

ವೈ.ಜಿ.ಮುರಳೀಧರನ್
(16 August 1956)

ವೈ.ಜಿ.ಮುರಳೀಧರನ್ ಅವರು [1956] ಬಿ ಕಾಂ ಪದವೀಧರರು ಮತ್ತು ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೋಮ ಪಡೆದಿದ್ದಾರೆ. ಬಿ ಎಚ್ ಇ ಎಲ್ ಕಾರ್ಖಾನೆಯಲ್ಲಿ 20 ವರ್ಷ ಹಣಕಾಸು ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ನಂತರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಲ್ಲಿ 12 ವರ್ಷ ಗ್ರಾಹಕ ವ್ಯವಹಾರಗಳ ಕಚೇರಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. 1993ರಿಂದ ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು ಇತ್ಯಾದಿ ಸಾಮಾಜಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಕೇಂದ್ರ ಸರಕಾರದ ವಿವಿಧ ಸಲಹಾ ಮಂಡಳಿಯ ಸದಸ್ಯರಾಗಿ ನಾಗರಿಕರನ್ನು ಪ್ರತಿನಿಧಿಸಿದ್ದಾರೆ. ರಾಜ್ಯ ಸರಕಾರದ ಆಡಳಿತ ತರಬೇತಿ ಸಂಸ್ಥೆ, ನ್ಯಾಷನಲ್ ಲಾ ಸ್ಕೂಲ್ ...

READ MORE

Related Books