‘ಲೋಕ ನಾಯಕ ಭೀಮಣ್ಣ ಖಂಡ್ರೆ’ ಕೃತಿಯು ರಘುಶಂಖ ಭಾತಂಬ್ರಾ ವ್ಯಕ್ತಿ ಚಿತ್ರ ಕುರಿತ ಬರವಣಿಗೆಯಾಗಿದೆ. ಕೃತಿಯ ಕುರಿತು ಬಸವರಾಜ ಬಲ್ಲೂರ ಅವರು, ಮನುಷ್ಯರ ಬಹುಮುಖ್ಯ ಅಸ್ತಿತೆ ಎಂದರೆ ಅವರ ಮಾತೃಭಾಷ., ಅದರ ಏಳಿಗೆಯೇ ಅವರ ಸಾಂಸ್ಕೃತಿಕ ಏಳಿಗೆಯೂ ಆಗಿರುತ್ತದೆಂಬುದು ಬೇರೆ ಹೇಳಬೇಕಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕದ ಏಳಿಗೆಯೇ ಬದುಕಿನ ಏಕಮಾತ್ರ ಉದ್ದೇಶವೆಂದರಿತು ಹೋರಾಟ ಮಾಡಿದ ಮಹನೀಯರ ಕಾರಣವಾಗಿ ಈ ನೆಲದಲ್ಲಿ" ಇವತು ಕನ್ನಡ ಉಸಿರಾಡುವಂತಾಗಿದೆ. ಹೆಜ್ಜೆಯನರಿತಲ್ಲದೆನಿಂದ ಹೆಜ್ಜೆಯನರಿಯಬಾರದೆಂಬ ಅಲ್ಲಮ ಪ್ರಭುದೇವರ ಮಾತು ಇತಿಹಾಸದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಇತಿಹಾಸವೆಂದರೆ ಕೇವಲ ಮಹಾರಾಜರ ವೈಭವದ ಬದುಕು, ಕೋಟೆ ಕೊತ್ತಲಗಳೇ ಅಲ್ಲ, ರಾಜ ಪರಿವಾರದ ಸುತ್ತಲಿನ ಜನ ಸಾಮಾನ್ಯರ ಬದುಕಿನ ಏಳುಬೀಳುಗಳು, ಸಮಕಾಲೀನ, ಕಲೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾದ ಅಂಶಗಳೆಲ್ಲ ಸೇರಿ ಇತಿಹಾಸವಾಗುತ್ತದೆ. ಚಾರಿತ್ರಿಕವಾದ ಒಂದು ಕೋಟೆಗೆ ಎಷ್ಟು ಮಹತ್ತವೋ ಒಂದೂರಿನ ಹಳೆ ವಾಡೆ(ಘೂಡೆ)ಗಳಿಗೂ ಅಷ್ಟೇ ಮಹತ್ವವಿರುವಂತೆ ರಾಜ ರಾಣಿಗೆ ಇರುವಷ್ಟೆ ಮಹತ್ವ ಒಂದೂರಿನ ಜನಪರ ಕಾಳಜಿಯ ವ್ಯಕ್ತಿಗಳಿಗೂ ಇರುತ್ತದೆ. ಅಂಥ ಸಾಂಸ್ಕೃತಿಕ ವ್ಯಕ್ತಿಗಳ ಕಾರ್ಯ ಸಾಧನೆ ಕಾಲಗತಿಯಲ್ಲಿ ಮರೆಯಾಗಬಾರದೆಂಬ ಕಾರಣವಾಗಿ ಕನ್ನಡ ನಾಡು, ನುಡಿ ಭಾಷೆ, ಸಾಹಿತ್ಯದ ಉಳಿವಿಗೆ ಹೋರಾಡಿ ಗಣನೀಯ ಸೇವೆ ಸಲ್ಲಿಸಿ ಸಮಾಜಕ್ಕೆ ಬೆಳಕಾದ ಸಾಧಕರ ಜೀವನ ಸಾಧನೆ ದಾಖಲಿಸಬೇಕಾಗಿರುವುದು ಪ್ರಜ್ಞಾವಂತ ಸಮಾಜದ ಹೊಣೆಗಾರಿಕೆ ಎಂದರಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈ ಕನ್ನಡ ಕಟ್ಟಿದವರು ಮಾಲಿಕೆ ಆರಂಭಿಸಿದೆ. 17ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಮೊದಲ ಹಂತದಲ್ಲಿ ಕನ್ನಡ ಕಟದವರು 17, ಹಾಗೂ 17 ಜನ ಸಾಂಸ್ಕತಿಕ ಚಿಂತಕರ ಪುಸ್ತಕಗನ್ನು ಹೊರತರುವ ಉದ್ದೇಶದಿಂದ ಈ ಕೃತಿಗಳನ್ನು ಪ್ರಕಟಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸ್ಥಳೀಯ ಎಲ್ಲ ಕನ್ನಡ ಹೋರಾಟಗಾರರ ಜೀವನ ಸಾಧನೆ ಕುರಿತ ಪುಸ್ತಕಗಳನ್ನು ಹೊರತರಲಾಗುತ್ತಿದೆ. ಹಿತ್ತಲ ಗಿಡ ಮದ್ದಲ್ಲ, ತಮ್ಮ ನೆಲದಲ್ಲಿ ಸಾಧಕರಿಗೆ ಮನ್ನಣೆ ದೊರೆಯಲಾರದು ಎಂಬ ತೆಳು ಗ್ರಹಿಕೆಯ ಹುಸಿಗೊಳಿಸಲು ಈ ಯೋಜನೆ ರೂಪಿಸಲಾಗಿದೆ. ಈ ಪುಸ್ತಕಗಳಲ್ಲಿ ಏಕಕಾಲಕ್ಕೆ ಹಲವು ವ್ಯಕ್ತಿಗಳ ಸಂಬಂಧಗಳನ್ನು ಜೋಡಿಸುವ, ಸಮಕಾಲೀನ ಸಾಂಸ್ಕೃತಿಕ ಚಿಂತನೆಗಳನ್ನು ದಾಖಲಿಸುವ ಜೀವನ ಚರಿತ್ರೆ ಕಟ್ಟಿಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಾಧಕರ ಕುರಿತು ಅಧ್ಯಯನ ಮಾಡುವವರಿಗೆ ಈ ಕೃತಿ ಮೂಲ ಆಕರವಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.
“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್; ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ...
READ MORE