ರೇವಣಸಿದ್ದೇಶ್ವರ

Author : ಎಂ.ಜಿ. ನಂಜುಂಡಾರಾಧ್ಯ

Pages 120

₹ 15.00




Year of Publication: 1975
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019

Synopsys

`ರೇವಣಸಿದ್ದೇಶ್ವರ'  ಜೀವನಚರಿತ್ರೆಯ ಪುಸ್ತಕವಿದು. ಲೇಖಕ ಎಂ.ಜಿ. ನಂಜುಂಡಾರಾಧ್ಯ ರಚಿಸಿದ್ದಾರೆ. ಬಹು ಹಿರಿಯ ಮತಾಚಾರ್ಯ. ಇವನನ್ನು ಕುರಿತು ಹಲವು ಪವಾಡಗಳ ಕಥೆಗಳಿವೆ. ಎಲ್ಲ ಕಥೆಗಳಲ್ಲಿ ಬೆಳಗುವುದು ರೇವಣಸಿದ್ದೇಶ್ವರನ ಲೋಕೋದ್ಧಾರದ ಹಂಬಲ.ಪದವಿ, ಶಕ್ತಿಗಳಿಗೆ ಬೆಲೆಕೊಡದೆ, ಒಳ್ಳೆಯತನ ಒಂದನ್ನೇ ಮೆಚ್ಚಿ, ಅಹಂಕಾರವನ್ನು ಮೆಟ್ಟಿ ಸಜ್ಜನರಿಗೆ ರಕ್ಷೆಯಾದ ಹಿರಿಯ ಚೇತನ ಎಂದು ರೇವಣಸಿದ್ದೇಶ್ವರ ಅವರ ಕುರಿತು ಲೇಖಕರು ವಿವರಿಸಿದ್ದಾರೆ. ಇವರ ಬಾಲ್ಯ ಜೀವನ, ಜನಸಾಮನ್ಯರೊಂದಿಗಿನ ಒಡನಾಟ, ಇವರ ಪವಾಡದ ಕತೆಗಳು, ಕೊನೆಯ ದಿನಗಳು, ಬದುಕಿನ ತಿರುವುಗಳು ಹೀಗೆ ರೇವಣಸಿದ್ದೇಶ್ವರ ಬದುಕಿನ ವಿವಿಧ ಆಯಾಮಗಳನ್ನು ಲೇಖಕರು ಸರಳ ಕನ್ನಡದಲ್ಲಿ ಚಿತ್ರಿಸಿದ್ದಾರೆ.

About the Author

ಎಂ.ಜಿ. ನಂಜುಂಡಾರಾಧ್ಯ
(01 August 1914 - 11 July 1991)

ಸಾಹಿತಿ, ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದ ನಂಜುಂಡಾರಾಧ್ಯ ಅವರು 1914 ಆಗಸ್ಟ್‌ 1 ರಂದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿ ಬಿದನೂರು ತಾಲೂಕಿನ ಗುಂಡ್ಲಹಳ್ಳಿಯಲ್ಲಿ ಜನಿಸಿದರು. ತಂದೆ ಗಂಗಾಧರಯ್ಯ, ತಾಯಿ ವೀರಮ್ಮ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಹಿಂದಿ ರಾಷ್ಟ್ರಭಾಷಾ ವಿಶಾರದ, ಕನ್ನಡದಲ್ಲಿ ವಿದ್ವಾನ್‌ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ವಿದ್ಯಾರ್ಥಿಯಾಗಿದ್ದಂದಿನಿಂದಲೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.  ಇವರು ಸಂಪಾದಿಸಿದ ಕೃತಿಗಳೆಂದರೆ ಕೈವಲ್ಯೋಪನಿಷತ್‌, ಮುಂಡಕೋಪನಿಷತ್‌, ಈಶಾವಾಸ್ಯೋಪನಿಷತ್‌, ಬ್ರಹ್ಮಸೂತ್ರ ವೃತ್ತಿ, ತತ್ತ್ವ ಪ್ರಕಾಶ, ಬಸವಪ್ಪಶಾಸ್ತ್ರಿಗಳ ಸಮಗ್ರ ಕೃತಿಗಳ ಬೃಹತ್ ಸಂಪುಟ, ಶಿವಾಗಮ, ಸೌರಭ, ಭಾರತೀಯದರ್ಶನ, ಶಕ್ತಿ ವಿಶಿಷ್ಟಾದ್ವೈತದರ್ಶನ, ದರ್ಶನ ದೀಪ್ತಿ, ...

READ MORE

Related Books