ಬಡಗುತ್ತಿಟ್ಟು ಯಕ್ಷಗಾನದ ಧ್ರುವತಾರೆ ಶಿರಿಯಾರ ಮಂಜು ನಾಯ್ಕ

Author : ಶ್ರೀಧರ ಉಪ್ಪೂರ

Pages 68

₹ 50.00




Year of Publication: 2008
Published by: ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಯಕ್ಷಗಾನ ಕಲಾವಿದ ಶಿರಿಯಾರ ಮಂಜುನಾಯ್ಕ ಅವರ ಬದುಕು-ಸಾಧನೆ ಕುರಿತು ಈ ಕೃತಿ ಚಿತ್ರಣ ನೀಡಿದೆ. ಬಡಗುತಿಟ್ಟು ಯಕ್ಷಗಾನದ ಧ್ರುವತಾರೆ ಶಿರಿಯಾರ ಮಂಜುನಾಯ್ಕರು, ಸಾಲಿಗ್ರಾಮ ಮೇಳದಲ್ಲಿ, ಶಿರಿಯಾರ ಕಲಾವಿದರು, ಶಿರಿಯಾರ ಪ್ರಭೆ, ಕೊಳ್ಕೆಬೈಲು ಯಕ್ಷಗಾನ ಕಲಾವಿಧರು. ವ್ಯಾಕರಣ ಶುದ್ಧಶೈಲಿಯ ಪಾತ್ರಧಾರಿ ಶ್ರೀ ಶಿರಿಯಾರ ಮಂಜುನಾಯ್ಕರು, ಯಕ್ಷಗಾನ ಸಿರಿ ಶಿರಿಯಾರ ಮಂಜು, ಕೆಂಕಿನ ಹೆಣ್ಣು-ಬಡಗಿನ ಗಂಡು, ಶಿರಿಯಾರ ಮಂಜುನಾಯ್ಕರು, ಮೋಡಿಗಾರ ಶಿರಿಯಾರ ಮಂಜುನಾಯ್ಕ, ಯಕ್ಷಗಾನದ ಯುಗ ಪರ್ವತಕ ಶಿರಿಯಾರ ಮಂಜುನಾಯ್ಕ ಮುಂತಾದ ವಿಷಯಗಳ ಮೂಲಕ ಅವರ ಹಿರಿದಾದ ವ್ಯಕ್ತಿತ್ವವನ್ನು ಕಟ್ಟಿಕೊಡಲಾಗಿದೆ. 

About the Author

ಶ್ರೀಧರ ಉಪ್ಪೂರ
(15 July 1953)

ನಿವೃತ್ತ ಉಪನ್ಯಾಸಕರು, ಲೇಖಕರಾದ ಶ್ರೀಧರ ಉಪ್ಪೂರ ಅವರು 1953 ಜುಲೈ 15ರಂದು ಕುಂದಾಪುರದ ಹಾಲಾಡಿಯಲ್ಲಿ ಜನಿಸಿದರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆಯಿಂದ ಸ್ನಾತಕೋತ್ತರ ಪದವಿ ಹಾಗೂ ಯಕ್ಷಗಾನ ಕುರಿತು ಪಿಎಚ್‌ಡಿ ಪದವಿ ಪಡೆದಿರುವ ಇವರು ಬಸ್ರೂರಿನ ಶಾರದಾ ಕಾಲೇಜಿನಲ್ಲಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕಾಲೇಜು ದಿನಗಳಿಂದಲೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ  ಇವರು ಯಕ್ಷಗಾನ ಕುರಿತು ಹಲವು ಕೃತಿಗಳನ್ನು ರಚಿಸಿದ್ದಾರೆ. ಶತಸ್ಮೃತಿ (ಅಭಿನಂದನಾ ಗ್ರಂಥ), ಭಾಗವ ನಾರಾಯಣಪ್ಪ ಉಪ್ಪೂರ, ಯಕ್ಷಗಾನ ಮತ್ತು ನಾಟಕ, ಪ್ರಬಂಜನ ಚರಿತೆ (ಯಕ್ಷಗಾನ ಪ್ರಸಂಗ), ಬಡಗತಿಟ್ಟು ಯಕ್ಷಗಾನ ದ್ರುವತಾರೆ ಶಿರಿಯಾರ ಮಂಜು ನಾಯ್ಕ ...

READ MORE

Related Books