ಎಂದಿಗೂ ಮರೆಯಲಾಗದ ಮಹಾ ಭಾಗವತರು

Author : ಗೋವಿಂದರಾವ್ ಅ. ಜಾಲಿಹಾಳ (ಜಾ.ಗೋ)

Pages 180

₹ 90.00




Year of Publication: 2010
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019
Phone: 9945036300

Synopsys

`ಎಂದಿಗೂ ಮರೆಯಲಾಗದ ಮಹಾ ಭಾಗವತರು' ಜೀವನಚರಿತ್ರೆಯ ಪುಸ್ತಕವಿದು. ಲೇಖಕ ರಾ.ಅ. ಜಾಲಿಹಾಳ ಅವರು ರಚಿಸಿದ್ದಾರೆ. ಇಪ್ಪತ್ತನೇ ಶತಮಾನದ ಮಧ್ಯಭಾಗದ ಭಾರತದ ಅಗ್ರಗಣ್ಯ ಧಾರ್ಮಿಕ ಮುಖಂಡರಲ್ಲೊಬ್ಬರು ’ಮಹಾಭಾಗವತ’ರೆಂದೇ ಪ್ರಸಿದ್ಧರೂ ಕೊಲ್ಲಾಪುರದ ಶ್ರೀ ಕರವೀರ ಪೀಠದ ಅಧ್ಯಕ್ಷರೂ ಅಗಿದ್ದ ಜಗದ್ಗುರು ಶ್ರೀ ಶಂಕರಾಚಾರ್ಯ ಡಾ. ಕುರ್ತಕೋಟಿ (1879-1967) ಅವರು. ಸದ್ಗುರು ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರ ಅನುಗ್ರಹಕ್ಕೆ ಪಾತ್ರರಾಗಿದ್ದ ಮಹಾಭಾಗವತರು; ಪ್ರಕಾಂಡ ವಿದ್ವಾಂಸರಾಗಿದ್ದು, ಸಮಾಜ ಸುಧಾರಣೆ ಗಾಗಿಯೂ ಮತಾಂತರಗೊಂಡಿರುವವರ ಪುನರಾವರ್ತನಕ್ಕಾಗಿಯೂ ಕಂಕಣಬದ್ಧರಾದವರು.  ಜೊತೆಜೊತೆಗೇ,  ಶಾಸ್ತ್ರಾಧ್ಯಯನದ ಉಜ್ಜೀವನಕ್ಕಾಗಿಯೂ ಸಂಸತ್ ಭಾಷಾ ಪ್ರಸಾರಕ್ಕಾಗಿಯೂ ಹಾಗೂ ರಾಷ್ಟ್ರೀಯ ದೃಷ್ಟಿಯ ವಿವಿಧ ಮುಖ ಕಾರ್ಯಗಳ ಪ್ರವರ್ತನೆಗಾಯೂ ಮಹಾಭಾಗವತರು ಮಾಡಿದ ಪರಿಶ್ರಮ ಇತಿಹಾಸಾರ್ಹವಾದದ್ದು. ಅವರು ಕರ್ನಾಟಕ ಮೂಲದವರೆಂಬುದು (ಗದಗ) ಕನ್ನಡಿಗರಿಗೆ ಅಭಿಮಾನದ ಸಂಗತಿ. ಇಂಥ ಅಗಾಧ ದೇಶವ್ಯಾಪಿ ಕಾರ್ಯ ಮಾಡಿದ ಸುಧಾರಕ ಸಂತ ಶ್ರೇಷ್ಠರ ಜೀವಿತ ಕಾರ್ಯ ಈ ಪೀಳಿಗೆಯವರಿಗೆ ಬಹುಮಟ್ಟಿಗೆ ಅಪರಿಚಿತವೇ ಆಗಿದೆ. ಈ ಕೊರತೆಯನ್ನು ನೀಗಿಸಿ ಅತ್ಯಂತ ಶ್ರಮಪೂರ್ವಕವಾಗಿ ಮಾಹಿತಿ ಸಂಗ್ರಹಿಸಿ, ಮಹಾಭಾಗವತರ ಪ್ರೇರಣಾದಾಯಕ ಜೀವನದ ಚಿತ್ರವನ್ನು ಈ ಕೃತಿಯಲ್ಲಿ ನೀಡಲಾಗಿದೆ.

About the Author

ಗೋವಿಂದರಾವ್ ಅ. ಜಾಲಿಹಾಳ (ಜಾ.ಗೋ)

ಗೋವಿಂದರಾವ್ ಅ. ಜಾಲಿಹಾಳ ಅವರು ಮೂಲತಃ ಗದಗದವರು. ತಂದೆ ಅನಂತರಾವ್ ಜಾಲಿಹಾಳ. ತಾಯಿ ರಾಧಾಭಾಯಿ. ಪ್ರಾಥಮಿಕ ವಿದ್ಯಾಭ್ಯಾಸ ಗದಗದಲ್ಲಿ. ಸ್ನಾತಕೋತ್ತರ ಪದವೀಧರು. ಮುಂಬೈ ವಿಶ್ವವಿದ್ಯಾಲಯ. “THE ETHICAL CONTRIBUTION’S OF THE LATE PROF HIRIYANNA” ಅವರ ಪಿಎಚ್.ಡಿ. ಮಹಾಪ್ರಬಂಧ. ಪ್ರಾಧ್ಯಾಪಕರಾಗಿ ವೃತ್ತಿ ಆರಂಭ. ಬಾಲ್ಯದಿಂದಲೂ ತತ್ತ್ವಶಾಸ್ತ್ರ, ಸಂಗೀತ, ಸಾಹಿತ್ಯಗಳತ್ತ ಒಲವು. ಗದ್ಯದಿಂದ ಪದ್ಯಕ್ಕೆ, ವಿಜಯಪಥ, ಅಂಚೆದಾರಿಯಲ್ಲಿ ಅವರ ಕವನ ಸಂಕಲನ.ವಂಶವೃಕ್ಷ ಮತ್ತು ಸಂಸ್ಕಾರ ಒಂದು ತುಲನಾತ್ಮಕ ವಿಮರ್ಶೆ, ಕಾವ್ಯಮಂಥನ ಅವರ ವಿಮರ್ಶಾ ಕೃತಿಗಳು. ಪಾಶ್ಚಾತ್ಯ ತತ್ತ್ವಶಾಸ್ತ್ರ ಬೋಧಕರಾಗಿ ಫ್ಲಾರಿಡಾದ ಪೆನ್ಸ್‌ಕೋಲಾ ಕಾಲೇಜಿನಿಂದ ಪ್ರಶಸ್ತಿ ಪಡೆದ ಪ್ರಮುಖರಲ್ಲೊಬ್ಬರು. ...

READ MORE

Related Books