ಪಿ. ಗಂಗಾಧರಸ್ವಾಮಿ ಅವರು ಹಿರಿಯ ರಂಗಕರ್ಮಿ. ಸಮುದಾಯ ರಂಗತಂಡದ ರೂವಾರಿಗಳಲ್ಲಿ ಒಬ್ಬರು. ಹಲವು ತಂಡಗಳನ್ನು ಕಟ್ಟಿ ಬೆಳೆಸಿದವರು. ರಾಜ್ಯದ ಮೂಲೆ ಮೂಲೆಗಳಲ್ಲಿ ರಂಗಶಿಬಿರಗಳನ್ನು ಸಂಘಟಿಸಿ, ಶಿಬಿರ ಚಕ್ರವರ್ತಿ ಎಂದೇ ಹೆಸರಾಗಿದ್ದಾರೆ. ವೃತ್ತಿರಂಗಭೂಮಿಯ ನಟನಾಗಿ ರಂಗಪ್ರವೇಶ ಮಾಡಿದ ಗಂಗಾಧರಸ್ವಾಮಿ, ಬೀದಿ ನಾಟಕಗಳವರೆಗೆ ಎಲ್ಲ ಬಗೆಯ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಹತ್ತಾರು ನಟ, ನಿರ್ದೇಶಕ, ಸಂಘಟಕರನ್ನು ರೂಪಿಸಿರುವ ಅವರು, ಆಧುನಿಕ ರಂಗಭೂಮಿಯ ಅವಿಭಾಜ್ಯ ಅಂಗವಾಗಿದ್ದಾರೆ. ಇವರ ಕುರಿತು ಲೇಖಕ ಮಂಜುನಾಥ ಬೆಳಕರೆ ಅವರು ಜೀವನ ಚಿತ್ರಣ ನೀಡಿರುವ ಕೃತಿ.
ಮೈಸೂರು ರಂಗಾಯಣದಲ್ಲಿ ಕಲಾವಿದರಾಗಿದ್ದ ಮಂಜುನಾಥ ಬೆಳಕೆರೆ ಅವರು ಮೂಲತಹ ದಾವಣಗೆರೆ ಜಿಲ್ಲೆ ಹರಿಹರದವರು. ಮೈಸೂರಿನಲ್ಲಿ ’ಪರಸ್ಪರ' ತಂಡ ಕಟ್ಟಿಕೊಂಡು ಅನೇಕ ನಾಟಕಗಳನ್ನು ನಿರ್ದೇಶಿಸಿದ್ದರು. ಶರೀಫ, ಇದಿತಾಯಿ, ಕಡಲದೋಣಿ, ಓಪನ್ ಕೋಟು, ಅಗ್ನಿಸ್ಪರ್ಶ, ಆಗಮನ 30ಕ್ಕೂ ಅಧಿಕ ನಾಟಕಗಳನ್ನು ಬರೆದಿದ್ದರು. ರಂಗಾಯಣ ಆರಂಭದಿಂದಲೂ ನಟರಾಗಿ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದರು. ಅಲ್ಲದೆ, ನಾಟಕ ನಿರ್ದೇಶಕ, ಸಾಹಿತಿ, ರಂಗಶಿಕ್ಷಕ, ರಂಗಾಯಣದ ರಂಗ ಡಿಪ್ಲೊಮಾದ ಸಂಯೋಜಕ ಪ್ರಾಂಶುಪಾಲರಾಗಿ ದುಡಿದಿದ್ದರು. ಅವರು 2016ರ ಡಿಸೆಂಬರ್ 20ರಂದು ಹೃದಯಾಘಾತದಿಂದ ನಿಧನರಾದರು. ...
READ MORE