ಕುವೆಂಪು ಅವರ ಹುಟ್ಟು ಬೆಳವಣಿಗೆ, ವಿದ್ಯಾಭ್ಯಾಸ, ವೃತ್ತಿ, ಸಾಹಿತ್ಯ ಕೃತಿಗಳು, ಸಾಧನೆಗಳು ಎಲ್ಲವನ್ನೂ ಸಂಕ್ಷಿಪ್ತವಾಗಿ ಈ ಪುಟ್ಟ ಪುಸ್ತಕದಲ್ಲಿ ಪರಿಚಯಿಸಲಾಗಿದೆ. ಜೊತೆಗ ರೈತಗೀತೆ, ನಾಡಗೀತೆ ಮತ್ತು ವಿಶ್ವ ಮಾನವ ಸಂದೇಶವನ್ನೂ ಕೊಡಲಾಗಿದೆ. ವಿಶೇಷವೆಂದರೆ, ಮಂತ್ರಮಾಂಗಲ್ಯ ವಿವಾಹಕ್ಕೆ ಹೆಚ್ಚಿನ ಆಧ್ಯತೆ ಕೊಟ್ಟಿರುವುದು. ಕುಪ್ಪಳಿಯಲ್ಲಿ ನಡೆಯುವ ಮಂತ್ರಮಾಂಗಲ್ಯ ರೀತಿಯ ಮದುವೆಗಳಿಗೆ ಆಗಮಿಸುವ ಜನರಿಗೆ ಕುವೆಂಪು ಅವರನ್ನು ಬಿ.ಆರ್. ಸತ್ಯನಾರಾಯಣ ಅವರು ಪರಿಚಯಿಸಿದ್ದಾರೆ.
ವೃತ್ತಿಯಿಂದ ಗ್ರಂಥಪಾಲಕರಾಗಿರುವ ಡಾ. ಬಿ.ಆರ್. ಸತ್ಯನಾರಾಯಣ ಅವರು ಪ್ರವೃತ್ತಿಯಿಂದ ಸಂಶೋಧಕ- ಲೇಖಕರೂ ಹೌದು. ಕೃಷಿಯಲ್ಲಿ ಆಸಕ್ತರಾಗಿರುವ ಸತ್ಯನಾರಾಯಣ ಅವರು ಹಳ್ಳಿ-ನಗರಗಳ ನಡುವೆ ಓಡಾಡಿದ ಅನುಭವದ ಹಿನ್ನೆಲೆಯಲ್ಲಿ ’ವೈತರಣೀ ದಡದಲ್ಲಿ (ಕವನ ಸಂಕಲನ) ಮತ್ತು ಮುಡಿ (ಕಥಾ ಸಂಕಲನ) ಪ್ರಕಟಿಸಿದ್ದಾರೆ. ಕನ್ನಡ ಛಂದಸ್ಸು: ಸಂಕ್ಷಿಪ್ತ ಪರಿಚಯ, ಕಲ್ಯಾಣದ ಚಾಲುಕ್ಯರು, ಸರಸ್ವತಿ- ವಿಸ್ಮಯ ಸಂಸ್ಕೃತಿ ಸಂಶೋಧನಾ ಕೃತಿ ರಚಿಸಿದ್ದಾರೆ. ಹಿರಿಯ ಸಂಶೋಧಕ ಹಂ.ಪ.ನಾಗರಾಜಯ್ಯ ಅವರ ಕೃತಿಗಳ ಸಾರ ಸೂಚಿ ಹೊಂದಿರುವ ’ಹಂಪನಾ ವಾಙ್ಮಯ’ ಪ್ರಕಟಿಸಿರುವ ಅವರು ಪೇಜತ್ತಾಯ ಅವರ ’ರೈತನಾಗುವ ಹಾದಿಯಲ್ಲಿ’ ಮತ್ತು ’ಕಾಗದದ ದೋಣಿ’ ಕೃತಿಗಳನ್ನು ಸಂಪಾದಕರಾಗಿ ಹೊರ ...
READ MORE