‘ವೆಂಕಟಪ್ಪ: ಸಮಕಾಲೀನ ಪುನರವಲೋಕನ’ ಕೆ.ವಿ. ಸುಬ್ರಹ್ಮಣ್ಯಂ ಅವರು ರಚಿಸಿರುವ ಕೃತಿ. ಇಲ್ಲಿ ಕೆ. ವೆಂಕಟಪ್ಪ-ಒಂದು ಹಿನ್ನೋಟ, ದಿನಚರಿಯ ಪುಟಗಳಿಂದ, ಪತ್ರಗಳು, ಪುನರುಜ್ಜೀವನದ ಪುನರವಲೋಕನ, ಕೆ.ವಿ. ಸಂಗ್ರಹದಲ್ಲಿದ್ದ ಪ್ರಮುಖ ಗ್ರಂಥಗಳು, ಗ್ರಂಥಋಣ ಹಾಗೂ ಶಬ್ದ ಸೂಚಿ ಎಂಬ ವಿಭಾಗಗಳಲ್ಲಿ ಕಲಾವಿದ ವೆಂಕಟಪ್ಪ ಅವರ ಬದುಕು ಬರಹಗಳ ಮಾಹಿತಿಯನ್ನು ದಾಖಲಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಾಗಟ ಅಗ್ರಹಾರದವರಾದ ಕೆ.ವಿ. ಸುಬ್ರಹ್ಮಣ್ಯಂ (ಜನನ: 18-12-1949) ಅವರು ದೃಶ್ಯಕಲೆಯ ಇತಿಹಾಸ- ವಿಮರ್ಶೆಗಳಿಗೆ ಸಂಬಂಧಿಸಿದ ಸಾಹಿತ್ಯ ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡವರು. ಕರ್ನಾಟಕದ ಆಧುನಿಕ ಶಿಲ್ಪಕಲೆ (1994), ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ (2007), ಕೆ. ವೆಂಕಟಪ್ಪ ಪುನರಾಲೋಕನ, ಇನ್ ಸ್ಟಾಲೇಷನ್ ಕಲಾ ಪ್ರಪಂಚ ಅವರ ಕೃತಿಗಳು. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ದೃಶ್ಯಕಲಾ ವಿಮರ್ಶೆ ಹಾಗೂ ಲೇಖನಗಳನ್ನು ಪ್ರಕಟಿಸಿರುವ ಅವರು ಸುಮಾರು ನಾಲ್ಕು ದಶಕಗಳ ಕಾಲ ಸತತವಾಗಿ ವಿಮರ್ಶೆ ಬರೆಯುತ್ತ ಬಂದಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ (1999), ಚೆನ್ನೈನ ಯುನೈಟೆಡ್ ರೈಟರ್ಸ್ ...
READ MORE