ಬಿ.ಎಂ.ಶ್ರೀ. ಕನ್ನಡ ಪ್ರಜ್ಞೆ

Author : ಎಂ. ನಾಗರಾಜ

Pages 160

₹ 100.00




Year of Publication: 2021
Published by: ಕನ್ನಡ ಅಭಿವೃದ್ಧಿ ಪ್ರಾಧಿಕಾರ
Address: 2ನೇ ಮಹಡಿ, ವಿಧಾನಸೌದ, ಬೆಂಗಳೂರು-560 001

Synopsys

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಕಾಯಕ ವರ್ಷಆಚರಣೆಯ ವೇಳೆ ಕನ್ನಡ ಕಾಯಕ ಮಾಲೆ-1 ರಲ್ಲಿ ಪ್ರಕಟಗೊಂಡ ‘ಬಿ.ಎಂ.ಶ್ರೀ. ಕನ್ನಡ ಪ್ರಜ್ಞೆ’ ಕೃತಿಯನ್ನು ಲೇಖಕ ಎಂ.ನಾಗರಾಜ್ ಸಂಪಾದಿಸಿದ್ದಾರೆ. ಬಿ.ಎಂ.ಶ್ರೀ ಅವರ ಬದುಕು ಹಾಗೂ ಬರಹಗಳ ಬಗೆಗೆ ಸಂಪಾದಿತ ಕೃತಿ ಇದಾಗಿದೆ. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಟಿ.ಎಸ್. ನಾಗಾಭರಣ ಅವರು ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರ ಮಾತುಗಳು ಕೃತಿಯ ಬೆನ್ನುಡಿಯಲ್ಲಿದೆ.. ಕೃತಿಯಲ್ಲೇ ಲೇಖಕರೇ ಹೇಳುವಂತೆ, ಪ್ರಾಚಾರ್ಯ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಇವರು 'ಶ್ರೀ' ಎಂಬ ಕಾವ್ಯನಾಮದಿಂದ ಪ್ರಸಿದ್ಧರು. ಕನ್ನಡದ ಕಣ್ವರೆಂಬ ಮಾತು ಇವರಿಗೆ ಅನ್ವರ್ಥಕವಾದುದು. ಇಂಗ್ಲಿಷ್ ಪ್ರಾಧ್ಯಾಪಕರಾಗಿ ಪ್ರಸಿದ್ಧಿ ಪಡೆದ ಇವರು ಕನ್ನಡದ ಗೌರವ ಪ್ರಾಧ್ಯಾಪಕರೂ ಆದುದು ಕನ್ನಡದ ಭಾಗ್ಯ ವಿಶೇಷ ಸೃಜನಶೀಲ ಸಾಹಿತ್ಯ ಇವರ ಮುಖ್ಯ ವಿವಕ್ಷೆಯಾದರೂ ಸೃಜನೇತರ ಸಾಹಿತ್ಯದಲ್ಲೂ ಇವರ ಕೊಡುಗೆ ಗಣನೀಯವಾದುದು. ಕನ್ನಡವನ್ನು ಸಮೃದ್ಧವಾಗಿ ಕಟ್ಟಿದ ಮಹಾಪುರುಷರು ಇವರು. ಇದಕ್ಕಾಗಿ ನಾಡನ್ನೆಲ್ಲಾ ಸುತ್ತಿ ಎಚ್ಚರಿಸಿದ ಕನ್ನಡ ಧೀಮಂತರು. ಪ್ರಾಚಾರ್ಯ ಬಿ.ಎಂ.ಶ್ರೀ. ಅವರು 1884 ಜನವರಿ 03ರಂದು ತುಮಕೂರು ಜಿಲ್ಲೆಯ ಸಂಪಿಗೆಯಲ್ಲಿ ಜನಿಸಿದರು. 1903ರಲ್ಲಿ ಎಫ್.ಎ. ಪರೀಕ್ಷೆಯನ್ನು ಮುಗಿಸಿ 1906ರಲ್ಲಿ ಬಿ.ಎ. ಪದವಿಯನ್ನು ಪಡೆದು ಮರುವರ್ಷವೇ ಬಿ.ಎಲ್. ಪದವಿಯನ್ನು ಪಡೆದರು. 19ನೆಯ ಶತಮಾನದ ಮೊದಮೊದಲ ವರ್ಷಗಳಲ್ಲಿಯೇ ಅವರು ಕನ್ನಡಕ್ಕೆ ಸಂಬಂಧಿಸಿದ ಕನಸುಗಳನ್ನು ನೇಯ್ದುಕೊಳ್ಳುತ್ತಿದ್ದರಂತೆ. ಅವರು 1911ರಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಅವರು ನೀಡಿದ 'ಕನ್ನಡ ಮಾತು ತಲೆಯೆತ್ತುವ ಬಗೆ' ಎಂಬ ಉಪನ್ಯಾಸ ಶತಮಾನ ಕಳೆದರೂ ಇದು ಮಹತ್ವದ ವಿಷಯಗಳನ್ನು ಒಳಗೊಂಡಿದೆ. ಅನಂತರ 'ಇಂಗ್ಲಿಷ್ ಗೀತಗಳು' ಪ್ರಕಟವಾಗಿ ಹೊಸಗನ್ನಡ ಕಾವ್ಯಕ್ಕೆ ನಾಂದಿ ಹಾಡಿತು. ಅವರ 'ಹೊಂಗನಸುಗಳು' ಕನ್ನಡದ ಹಿರಿಮೆಯನ್ನೂ ಮೇಲೆಯನ್ನೂ ತೋರಿಸಿದ ಅಪೂರ್ವ ಕಾವ್ಯಸಂಕಲನ. ಅವರು ಇಂಗ್ಲಿಷ್ ಅಧ್ಯಾಪಕರಾಗಿ, ಸಹಪ್ರಾಧ್ಯಾಪಕರಾಗಿ, ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಆಗಿ ಹಂತಹಂತವಾಗಿ ಮೇಲೇರಿದರು. ಆ ಮೂಲಕ ಕನ್ನಡದ ಮೇಲೆಗಾಗಿ ತುಂಬಾ ಶ್ರಮಿಸಿದರು. ಕನ್ನಡ ಸಾಹಿತ್ಯ ಪರಿಷತ್ತನ್ನು ರೂಪಿಸಿದವರಲ್ಲಿ ಅವರ ಕೊಡುಗೆ ಸ್ಮರಣೀಯ. ಅವರು ನಾಡಿನ ಉದ್ದಗಲಕ್ಕೂ ಸಂಚರಿಸುತ್ತ ಕನ್ನಡದ ಕಹಳೆಯನ್ನು ಊದಿದರು. ನಾಡು ನುಡಿಯ ಹಿರಿಮೆಯನ್ನು ಎತ್ತಿ ಸಾರಿದರು. ದಕ್ಷಿಣಕರ್ನಾಟಕದ ಜನರನ್ನು ಉತ್ತರಕರ್ನಾಟಕಕ್ಕೂ ಕಲ್ಯಾಣಕರ್ನಾಟಕಕ್ಕೂ ಕರೆದುಕೊಂಡು ಹೋದರು. ಅಲ್ಲಿ ಕನ್ನಡ ಉತ್ಸವಗಳನ್ನೂ ಆಯಾ ಭಾಗದ ಜನಪದದ ಹಿರಿಮೆಯನ್ನೂ ಎತ್ತಿ ತೋರಿಸಿದರು. ಆಯಾಯ ಪ್ರದೇಶದ ಕವಿಗಳನ್ನೂ ವಿದ್ವಾಂಸರನ್ನೂ ಲೇಖಕರನ್ನೂ ಕನ್ನಡ ಕಟ್ಟುವಂತೆ ಪೇರಿಸಿದರು. ಅಲ್ಲಲ್ಲಿ ದತ್ತಿಗಳನ್ನು ಇಟ್ಟರು. ಮರಾಠಿಮಯವಾಗುತ್ತಿದ್ದ ಬೆಳಗಾವಿ ಭಾಗದಲ್ಲಿ ಕನ್ನಡದ ಅಸ್ಮಿತೆಯನ್ನು ಸಾರಿದರು. ಧಾರವಾಡದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಲೇ ತಮ್ಮ ಇಳಿವಯಸ್ಸಿನಲ್ಲಿ ಕನ್ನಡದ ಎಚ್ಚರಿಸುವ ಆವೇಶವನ್ನು ಉಂಟುಮಾಡಿದರು. 'ಶ್ರೀ' ಅವರು ಕನ್ನಡಕ್ಕೆ ಬಹುಮುಖತ್ವವನ್ನು ಒದಗಿಸಿಕೊಟ್ಟ ಮಣ್ಯಪುರುಷರು. ಅವರು ಮಾಡಿದ ಕನ್ನಡದ ಕೆಲಸಗಳು ಭವಿಷ್ಯತ್ತಿನ ಕರ್ನಾಟಕ ನಿರ್ಮಾಣ ಆಗಲು ಸಹಾಯಕವಾಯಿತು. ಈ ಪುಸ್ತಕವು ಆಚಾರ್ಯ ಬಿ.ಎಂ.ಶ್ರೀ. ಅವರ 'ಕನ್ನಡಪ್ರಜ್ಞೆ'ಯ ವಿವಿಧ ಮುಖಗಳನ್ನು ಪರಿಚಯ ಮಾಡಿಕೊಡುತ್ತದೆ. ಕನ್ನಡ-ಕನ್ನಡಿಗ-ಕರ್ನಾಟಕದ ಬಹುಮುಖ ಪರಿಕಲ್ಪನೆಯನ್ನು ಇಲ್ಲಿಯ ಲೇಖನಗಳು ನಮಗೆ ನೀಡುತ್ತವೆ. ಕನ್ನಡದ ಸರ್ವಾಂಗೀಣ ಬೆಳವಣಿಗೆಯಲ್ಲಿ ಅವರ ಪಾತ್ರ ಬಹು ದೊಡ್ಡದಿದೆ ಎಂಬುದಾಗಿ ಹೇಳಿದ್ದಾರೆ.

About the Author

ಎಂ. ನಾಗರಾಜ

ಪ್ರಾಚೀನ ಸಾಹಿತ್ಯ ಹಾಗೂ ಆಧುನಿಕ ಸಾಹಿತ್ಯ ಎರಡರಲ್ಲೂ ಪರಿಣತಿ ಪಡೆದಿರುವ ಎಂ. ನಾಗರಾಜ ಅವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸ ಅಮರಾವತಿಯಲ್ಲಿ 1969 ಜುಲೈ 01ರಂದು ಜನಿಸಿದರು. ತಂದೆ ಎಂ. ದೇವಣ್ಣ, ತಾಯಿ ಎಂ. ತಾಯಮ್ಮ. ಗುಲಬರ್ಗಾ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ವ್ಯಾಸಂಗ ಮಾಡಿ ಪ್ರಥಮ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ, ಡಾ. ಶಾಂತಿನಾಥ ದಿಬ್ಬದ ಅವರ ಮಾರ್ಗದರ್ಶನದಲ್ಲಿ 'ವಚನಕಾರ ಮಡಿವಾಳ ಮಾಚಿದೇವ' ಅಧ್ಯಯನ ಕೈಗೊಂಡು 'ಬಿ. ಎಂ. ಹೊರಕೇರಿ ಚಿನ್ನದ ಪದಕ'ದೊಂದಿಗೆ ಎಂ.ಫಿಲ್. ಪದವಿ. ಡಾ. ಸುಬ್ಬಣ್ಣ ರೈ ಅವರ ಮಾರ್ಗದರ್ಶನದಲ್ಲಿ 'ಕರ್ನಾಟಕ ಮಡಿವಾಳರು' ...

READ MORE

Related Books