ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಯುದ್ಧ ಪೀಡಿತರಾದ ಯುಹೂದಿ ಮಕ್ಕಳ ಉಳಿವಿಗಾಗಿ ತನ್ನ ಮತ್ತು ತನ್ನವರ ಸಾವಿನೊಂದಿಗೆ ಹೋರಾಡಿ ಆ ಮಕ್ಕಳಿಗೆ ಹೊಸ ಉಸಿರು, ಬದುಕು ಕಟ್ಟಿಕೊಟ್ಟ ಧೀಮಂತ ಮಹಿಳೆ ಇರೇನಾ ಸಂಡ್ಲೆರ್. ಉದಾತ್ತ ಮಹಿಳೆಯೊಬ್ಬಳ ಸಾಹಸಮಯ ಬದುಕನ್ನು”ಜೊಲಾಂಟಾ’ ಕೃತಿ ಕಟ್ಟಿಕೊಡುತ್ತದೆ.
ಲೇಖಕಿ ಪಲ್ಲವಿ ಇಡೂರು ಬರೆದಿರುವ ಈ ಕೃತಿ ಜರ್ಮನಿಯ ನಾಜಿ ಪಡೆಯಿಂದ ನಿರಂತರ ಕಿರುಕುಳ ಅನುಭವಿಸಿ ಎರಡೂವರೆ ಸಾವಿರ ಯಹೂದಿ ಜನಾಂಗದ ಮಕ್ಕಳನ್ನು ರಕ್ಷಿಸಿದ ಇರೇನಾ ಸೆಂಡ್ಲರ್ ಮಹಿಳೆಯ ಜೀವನಗಾಥೆಯನ್ನು ಚಿತ್ರಿಸಿದೆ. ಪೋಲೆಂಡ್ ದೇಶದ ಇರೇನಾ ಮಕ್ಕಳನ್ನು ರಕ್ಷಿಸಲು ಪಟ್ಟ ಕಷ್ಟ, ಹೋರಾಡಿದ ಕ್ಷಣಗಳು, ಮನುಷ್ಯರ ನಡುವೆ ಜಾತೀ ವೈರುಧ್ಯಗಳು ಎದ್ದುನಿಂತಾಗ ಜೊಲಾಂಟಾ ಮಾಡಿದ ಹೋರಾಟದ ಬದುಕು ಕಣ್ಣು ತೆರೆಸುವಂತದ್ದು.
ಪಲ್ಲವಿ ಇಡೂರ್ ಮೂಲತಃ ಕುಂದಾಪುರ ತಾಲೂಕಿನ ಉಪ್ಪುಂದವೆಂಬ ಕಡಲತಡಿಯ ಊರಿನವರು. ಶಿಕ್ಷಕ ದಂಪತಿಯ ಮಗಳಾದ ಪಲ್ಲವಿ ಅವರು ಓದಿದ್ದು ಅಪ್ಪ ಅಮ್ಮ ಕೆಲಸ ಮಾಡುತ್ತಿದ್ದ ಸರಕಾರಿ ಶಾಲೆಯಲ್ಲಿ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಂಗಳೂರಿಗೆ ತೆರಳಿದ ಅವರ ಹಾಸ್ಟೆಲ್ ಜೀವನ, ಒಂಟಿತನಕ್ಕೆ ಸಂಗಾತಿಯಾಗಿದ್ದು ಪುಸ್ತಕ ಮತ್ತು ಸಂಗೀತ. ಓದಿದ್ದು ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೋಮಾ ಎಂಜಿನಿಯರಿಂಗ್. ಆನಂತರ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಡಿಪ್ಲೋಮಾ ಪಡೆದು ಕೆಲವರ್ಷ ಪ್ರತಿಷ್ಠಿತ ಐಟಿ ಕಂಪೆನಿಗಳಲ್ಲಿ ಕೆಲಸ. ಪತಿ ಮತ್ತು ಒಬ್ಬ ಮಗನ ಪುಟ್ಟ ಕುಟುಂಬ. ವೈಯಕ್ತಿಕ ಕಾರಣಗಳಿಂದಾಗಿ ಉದ್ಯೋಗ ತೊರೆದು ಸ್ವಂತ ಉದ್ಯೋಗದಲ್ಲಿ ತೊಡಗಿಕೊಂಡಿದ್ದು, ...
READ MOREಜೊಲಾಂಟಾ’ ಕೃತಿಯ ಕುರಿತು ಅನುವಾದಕಿ ಪಲ್ಲವಿ ಇಡೂರು ಅವರ ಸಂದರ್ಶನ