ಅಮೆರಿಕಾದ ಕಪ್ಪು ಜನರಿಗೆ ಸಮಾನ ನಾಗರಿಕ ಹಕ್ಕುಗಳಿಗಾಗಿ ಚಳವಳಿ ಸಂಘಟಿಸಿದವರು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್. ಅಮೆರಿಕಾದಲ್ಲಿ ಬೇರೂರಿದ್ದ ವರ್ಣಭೇದದ ವಿರುದ್ದ ಹೋರಾಟ ನಡೆಸಿದ್ದ ಮಾರ್ಟಿನ್ ಅವರನ್ನು ಕನ್ನಡ ಓದುಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಬೆ .ಗೋ. ರಮೇಶ್ ಅವರು ಈ ಕೃತಿಯನ್ನು ರಚಿಸಿದ್ದಾರೆ.
ಮಾರ್ಟಿನ್ ಲೂಥರ್ ಅವರ ವೈಯಕ್ತಿಕ ಪರಿಚಯ ವರ್ಣಭೇದದ ವಿರುದ್ಧ ಅವರು ನಡೆಸಿದ್ದ ಹೋರಾಟ, ಐತಿಹಾಸಿಕವಾದ ಇವರ 'ಐಹ್ಯಾವ್ ಎ ಡ್ರೀಮ್' ಭಾಷಣ, ಭಾರತಕ್ಕೆ ಬಂದು ಗಾಂಧೀಜಿಯವ ಹೋರಾಟ ಹಾಗೂ ಗಾಂಧಿ ಓಡಾಡಿದ ಸ್ಥಳಗಳಲ್ಲಿ ಓಡಾಡಿ ಮಾಹಿತಿ ಸಂಗ್ರಹಿಸಿರುವುದು, ಹೀಗೆ ಕಿಂಗ್ ಕುರಿತ ಮಾಹಿತಿ ಕೈಪಿಡಿ ಇದಾಗಿದೆ.
ಬೆ.ಗೋ. ರಮೇಶ್ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಹನಸಗೆಯಲ್ಲಿ ಆಗಸ್ಟ್ 22 , 1945ರಲ್ಲಿ ಜನಿಸಿದರು. ತಂದೆ ಗೊವಿಂದರಾಜು, ತಾಯಿ ರಾಧಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ನಡೆದದ್ದು ಬೆಂಗಳೂರಿನ ಮಲ್ಲೇಶ್ವರಂ ಶಾಲೆಯಲ್ಲಿ. ಇಂಟರ್‌ಮೀಡಿಯೆಟ್ ಓದಿದ್ದು ಸರಕಾರಿ ಕಾಲೇಜಿನಲ್ಲಿ. ಮುಂದೆ ರಮೇಶರು ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಪಡೆದರು. ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಉದ್ಯೋಗ ನಿರ್ವಹಿಸಿದ ಬೆ. ಗೋ ರಮೇಶರು ಕರ್ನಾಟಕ ಪವರ್ ಕಾರ್ಪೋರೇಷನ್ನಿನಲ್ಲಿ ಸಹಾಯಕ ಎಂಜನಿಯರಾಗಿ, ಸಹಾಯಕ ಎಕ್ಸುಕ್ಯುಟಿವ್ ಎಂಜನಿಯರಾಗಿ, ಎಕ್ಸಿಕ್ಯುಟಿವ್ ಎಂಜನಿಯರಾಗಿ, ರಾಯಚೂರಿನ ಶಾಕೋತ್ಪನ್ನ ವಿದ್ಯುದಾಗಾರದಲ್ಲಿ ಸೇವೆ ಸಲ್ಲಿಸಿ ...
READ MORE