ಲೇಖಕ ಡಾ. ರಮೇಶ ಎಸ್. ಕತ್ತಿ ಅವರ ಕೃತಿ-ಡಾ. ಚನ್ನಪ್ಪ ಕಟ್ಟಿ: ಬದುಕು-ಬರಹ. ಈ ಕೃತಿಯು ಕತೆಗಾರ ಡಾ.ಚನ್ನಪ್ಪ ಕಟ್ಟಿ ಅವರ ಕೃತಿಗಳ ಅವಲೋಕನ. ಅವರ ಜೀವನ ಮೊದಲ ಅಧ್ಯಾಯದಲ್ಲಿದ್ದರೆ, ಉಳಿದ ನಾಲ್ಕು ಅಧ್ಯಾಯಗಳಲ್ಲಿ ಚನ್ನಪ್ಪ ಕಟ್ಟಿ ಬದುಕು, ಕಟ್ಟಿಯವರ ಕಾವ್ಯ, ಕತೆಗಾರ ಕಟ್ಟಿ, ಸಂಶೋಧನೆ, ಸಂಪಾದನೆ, ವಿಮರ್ಶೆ ಇತ್ಯಾದಿ, ಮುನ್ನಡಿಗಳು ಹಾಗೂ ಪ್ರಕಟಿತ ಬಿಡಿ ಲೇಖನಗಳು, ಹಾಗೂ ಚನ್ನಪ್ಪ ಕಟ್ಟಿ ಅವರೊಂದಿಗೆ ಸಂವಾದ, ಸಮಾರೋಪ, ಡಾ.ಕಟ್ಟಿ ಅವರ ವ್ಯಕ್ತಿಗತ ವಿವರ ಹೀಗೆ ಅಧ್ಯಾಯಗಳನ್ನು ಒಳಗೊಂಡಿದೆ.
ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದವರು. ಅಪ್ಪ: ಸಿದ್ದಣ್ಣ ಅವ್ವ: ಮಹಾದೇವಿ. (ಜನನ: 28.08.1978 ). ಕಡಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಿಂದಗಿಯಲ್ಲಿ ಬಿ.ಎ. ಪದವಿ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿ.ವಿ.ಯಿಂದ ಎಂ.ಎ, ಹಾಗೂ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿ.ಇಡಿ, ಪದವೀಧರರು. ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲದಲ್ಲಿ (ಈಗ ತಾಲೂಕು ಕೇಂದ್ರ) ವಾಸವಾಗಿದ್ದು, ‘ವಿಜಯಪುರ ಜಿಲ್ಲೆಯ ಸಣ್ಣ ಕತೆಗಳು’ ವಿಷಯವಾಗಿ ಗುಲಬರ್ಗಾ ವಿ.ವಿ. ಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ದೊರೆತಿದೆ. ಕೃತಿಗಳು : ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ...
READ MORE