’ಸಾರಸ್ವತ ಲೋಕದ ಅಮೂಲ್ಯ ನಿಧಿ ರಸಿಕ ಪುತ್ತಿಗೆ’ ಕೃತಿಯು ಪಿ. ಸುಬ್ರಹ್ಮಣ್ಯ ಆಚಾರ್ಯ ಅವರ ಬದುಕಿನ ಚಿತ್ರಣ ಮತ್ತು ಸಾಧನೆಗಳ ಕುರಿತ ಚಿತ್ರಣವಾಗಿದೆ. ಲೇಖಕ ವಿ. ರಂಗನಾಥ್ ಮೈಸೂರು ಅವರು ಕೃತಿ ರಚನೆಕಾರರು.
ಪಿ. ಸುಬ್ರಹ್ಮಣ್ಯ ಆಚಾರ್ಯ ಅವರು ‘ರಸಿಕ ಪುತ್ತಿಗೆ’ ಎಂದೇ ಪ್ರಖ್ಯಾತಿ. ಸಂಸ್ಕೃತ ಸಾಹಿತ್ಯ ಮತ್ತು ಭಾರತೀಯ ವೇದಾಂತ ತತ್ವಗಳನ್ನು ತಂದೆಯವರಿಂದ ಕಲಿತರು. ಕನ್ನಡ, ತಮಿಳು, ಕೊಂಕಣಿ, ತೆಲುಗು, ಮಲಯಾಳ, ಹಿಂದಿ, ಸಂಸ್ಕೃತ ಮತ್ತು ಆಂಗ್ಲ ಭಾಷೆಯಲ್ಲಿ ಸಾಹಿತ್ಯವನ್ನು ಸಂಪಾದಿಸಿದರು. ರಸಿಕ ಪುತ್ತಿಗೆ' ಹಾಗೂ 'ಸುವೆಂಪು' ಎಂಬವು ಅವರ ಕಾವ್ಯನಾಮಗಳು. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ನಚಿಕೇತ, ಕನಕದಾಸ, ಮಧ್ವಾಚಾರ್ಯ ಎಂಬ ಅವರ ಹಿಂದಿ ಗ್ರಂಥಗಳು ಸಮಗ್ರ ಭಾರತದಲ್ಲಿ ಖ್ಯಾತಿಯನ್ನುಗಳಿಸಿವೆ.
ರಸಿಕ ಪುತ್ತಿಗೆಯ ಕುರಿತು ಎಸ್.ವಿ. ಶ್ರೀನಿವಾಸರಾಯರು 1986ರಲ್ಲಿ ಪ್ರಕಟಿಸಿರುವ 'ಮಕ್ಕಳೇ ಇವರನ್ನು ನೀವು ಬಲ್ಲಿರಾ?' ಎಂಬ ಪುಸ್ತಕದಲ್ಲಿ ವಿ. ಸುಬ್ಬಣ್ಣ ಅಚಾರ್ಯ ಅವರನ್ನು ಪರಿಚಯಿಸುತ್ತಾ, ಸಾಹಿತ್ಯದ ಎಲ್ಲ ಪ್ರಕಾರಗಳನ್ನು (ರಸಿಕ ಪುತ್ತಿಗೆ) ಇವರು ಹೀಗೆ ಸಂಪನ್ನಗೊಳಿಸುವ ಕ್ರಿಯಾಶೀಲ ಸಾಹಿತಿ, ತುಂಬು ಚುರುಕಿನ ವಿಮರ್ಶಕ’ ಎಂದು ಪ್ರಶಂಸಿಸಿದ್ದಾರೆ. 'ರಸಿಕ ಪುತ್ತಿಗೆ’ ಅವರು ಹಲವು ಕೃತಿಗಳನ್ನು ಕನ್ನಡದಿಂದ ಹಿಂದಿಗೂ, ಹಿಂದಿ ಹಾಗೂ ಸಂಸ್ಕೃತದಿಂದ ಕನ್ನಡಕ್ಕೂ ಅನುವಾದಿಸಿದ್ದಾರೆ.
ಲೇಖಕ ವಿ. ರಂಗನಾಥ್ ಅವರು 26 ವರ್ಷ ಕಾಲ ಸರಕಾರಿ ಸೇವೆಯಲ್ಲಿದ್ದು, ತಹಸೀಲ್ದಾರರಾಗಿ ಈಗ ನಿವೃತ್ತರು. ಬಿ.ಎಸ್ಸಿ, ಎಲ್.ಎಲ್.ಬಿ, ಡಿಪ್ಲೋಮ ಇನ್ ಜರ್ನಲಿಸಂ, ಪಿ.ಜಿ ಡಿಪ್ಲೋಮ ಇನ್ ಜರ್ನಲಿಸಂ, ಪಿ.ಜಿ ಡಿಪ್ಲೋಮೋ ಇನ್ ಮಾಸ್ ಕಮ್ಯುನಿಕೇಶನ್ ಜರ್ನಲಿಸಂ, ಎಂ. ಎ ಕನ್ನಡ, ಪಿ.ಹೆಚ್.ಡಿ(ಕೆ.ಎಸ್. ಓ.ಯು), ಎಂ.ಎ(ಇತಿಹಾಸ), ಪಿ.ಹೆಚ್.ಡಿ(ಐನ್ ಸ್ಟೀನ್ ಇಂಟರ್ ನ್ಯಾಷನಲ್ ಯೂನಿವರ್ಸಿಟಿ, ಯುಎಸ್‌ಎ), ಮೈಸೂರು ದಸರಾ ಉತ್ಸವದ ವಿಶೇಷ ಕರ್ತವ್ಯಾಧಿಕಾರಿಯಾಗಿ 13 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ದಸರಾ ಬಗ್ಗೆ ಹಲವಾರು ವರ್ಷ ಆಕಾಶವಾಣಿಯಲ್ಲಿ ದೂರದರ್ಶನ ವಾಹಿನಿಗಳಲ್ಲಿ ವೀಕ್ಷಕರಿಗೆ ವಿವರಣೆ ನೀಡಿದ್ದಾರೆ. ಭದ್ರಾವತಿ ಹಾಗೂ ಬೆಂಗಳೂರು ಆಕಾಶವಾಣಿ ಕೇಂದ್ರಗಳಿಂದ ಸುಮಾರು 100 ...
READ MORE