ಎಂ.ಜೆ. ಶುದ್ಧೋದನ

Author : ಎಚ್.ಎಂ. ಪರಮೇಶ

Pages 10

₹ 10.00




Year of Publication: 1995
Published by: ಕರ್ನಾಟಕ ಲಲಿತಕಲಾ ಅಕಾಡೆಮಿ
Address: ಕರ್ನಾಟಕ ಲಲಿತಕಲಾ ಅಕಾಡೆಮಿ 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560002

Synopsys

ಲೇಖಕರಾದ ಎಚ್. ಎಂ. ಪರಮೇಶ  ಅವರು ಬರೆದಿರುವ ’ ಎಂ.ಜೆ. ಶುದ್ಧೋದನ’ ಅವರ ಕುರಿತಾದ ಪುಸ್ತಕವು ಕರ್ನಾಟಕ ಲಲಿತಕಲಾ ಅಕಾಡೆಮಿಯ ’ಕರ್ನಾಟಕ ಕಲಾವಿದರ ಮಾಲೆ’ ಸರಣಿಯಲ್ಲಿ ಪ್ರಕಟಗೊಂಡಿದೆ.

’ಎಂ. ಜೆ. ಶುದ್ಧೋದನ’ ಅವರು ಪ್ರಕೃತಿಚಿತ್ರ, ಭಾವಚಿತ್ರ, ಮತ್ತು ತೈಲವರ್ಣ ಚಿತ್ರ ರಚನೆಯಲ್ಲಿ ಹೆಸರಾಂತ ಕಲಾವಿದರು. ಕಲೆಯನ್ನು ಸವಾಲಾಗಿ ಸ್ವೀಕರಿಸಿ , ಬದುಕಿನುದ್ದಕ್ಕೂ ಸಾಧನೆಗೈದು, ಅಪೂರ್ವಸಿದ್ಧಿಯನ್ನು ಪಡೆದವರು.

ಇಂತಹ ಕಲಾ ಪ್ರತಿಭೆಯ ಜೀವನ ಚಿತ್ರಣ, ಕಲಾ ಕೊಡುಗೆಗಳನ್ನು ತಿಳಿಸುವ ಪುಸ್ತಕ ಇದಾಗಿದೆ.

About the Author

ಎಚ್.ಎಂ. ಪರಮೇಶ

ಎಚ್. ಎಂ. ಪರಮೇಶ  ಚಿತ್ರದುರ್ಗ ಜಿಲ್ಲೆಯ ಹರ್ತಿಕೋಟೆಯ ಶ್ರೀ ಪರಮೇಶ್ವರಯ್ಯ ಅವರು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ. ಪದವೀಧರರು. ಶ್ರೀಯುತರು ಕಳೆದ 30 ವರ್ಷಗಳಿಂದ ಅಧ್ಯಾಪನ ವೃತ್ತಿಯಲ್ಲಿ ನಿರತರಾಗಿದ್ದು, ಪ್ರಸ್ತುತ ಮಂಡ್ಯದ ಬಾಲಕರ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಿಸುಗುಟ್ಟಿನ ಬಯಕೆ' ಕವನ ಸಂಕಲನದಿಂದ ಸಾಹಿತ್ಯಲೋಕ ಪ್ರವೇಶಿಸಿದ ಇವರು ಹದಿನೈದಕ್ಕೂ ಮಿಕ್ಕ ಕೃತಿಗಳನ್ನು ಹೊರತಂದಿದ್ದಾರೆ. ಬದುಕೊಂದು ದಾರಿ' ಮತ್ತು 'ದುಡಿಮೆಗೊಂದು ದಾರಿ' ಎಂಬ ಇವರ ಎರಡು ಕೃತಿಗಳಿಗೆ ಜನ ಶಿಕ್ಷಕ ನಿರ್ದೇಶನಾಲಯ ನವದೆಹಲಿಯಿಂದ ರಾಷ್ಟ್ರೀಯ ಪುರಸ್ಕಾರ ದೊರಕಿದೆ. 'ಜೇನುಸಾಕಣೆ' ಎಂಬ ಇವರ ಮತ್ತೊಂದು ಕೃತಿ ಕರ್ನಾಟಕ ...

READ MORE

Related Books