ಲೇಖಕ ಡಾ. ಸುರೇಂದ್ರಕುಮಾರ್ ಕೆರಮಗಿ ಅವರ ರಚಿಸಿದ "ಹಾ. ಮಾ.ನಾಯಕ" ಕೃತಿಯು ಹಿರಿಯ ಸಾಹಿತಿ ಹಾರೋಗದ್ದೆ ಮಾನಪ್ಪ ನಾಯಕ (ಹಾ.ಮಾ.ನಾಯಕ) ಅವರ ಜೀವನ ಚರಿತ್ರೆಯನ್ನು ಒಳಗೊಂಡಿದೆ. ಹಾಮಾನಾ ಬರೆದ ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಸಾಹಿತಿಕ ಮತ್ತು ಕೃತಿ ಚಿಂತನೆ ಕುರಿತಾದ ಅಂಕಣಗಳ ಬರಹಗಳೂ ಇಲ್ಲಿ ಸಂಕಲನಗೊಂಡಿವೆ. ಕನ್ನಡ ಕಟ್ಟುವ ಕೆಲಸದಲ್ಲಿ ಹಾ.ಮಾ. ನಾಯಕರು ವೀರ ಮಾಹೇಶ್ವರ ನಿಷ್ಠೆಯಿಂದ ಕೆಲಸ ಮಾಡಿದವರು ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸುವ ವಿಷಯದಲ್ಲಿ ಕನ್ನಡ ಮಾಧ್ಯಮದಲ್ಲಿ ಮಕ್ಕಳು ಶಿಕ್ಷಣ ಪಡೆಯುವ ವಿಷಯದಲ್ಲಿ ಕನ್ನಡಿಗರಿಗೆ ದಕ್ಕಬೇಕಾದ ಉದ್ಯೋಗ ಹಾಗೂ ರಾಜಕೀಯ ನಾಯಕರು ಕನ್ನಡಕ್ಕೆ ಕನ್ನಡಿಗರಿಗೆ ಕೊಡಬೇಕಾದ ಆದ್ಯತೆಯ ಕುರಿತ ಮೌಲಿಕ ಸಂಶೋಧನಾತ್ಮಕ ಶಿಸ್ತಿನ ಬರಹದ ಕಿರುಹೊತ್ತಿಗೆ ಇದು.
ಡಾ. ಸುರೇಂದ್ರಕುಮಾರ್ ಕೆರಮಗಿ ಅವರು ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನವರು. ಸ್ವಾಯತ್ತ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರು. "ಡಾ.ಹಾ.ಮಾ ನಾಯಕ ಅವರ ಅಂಕಣ ಸಾಹಿತ್ಯ ಒಂದು ಅಧ್ಯಯನ" ವಿಷಯವಾಗಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯವು ಇವರಿಗೆ ಪಿಎಚ್ ಡಿ ಪ್ರದಾನ ಮಾಡಿದೆ. ಹಳೆಗನ್ನಡ ಸಾಹಿತ್ಯದಲ್ಲೂ ಇವರಿಗೆ ಆಸಕ್ತಿ. ರಾಷ್ಟ್ರೀಯ,ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕೃತಿಗಳು: ಆಯ್ದ ವೈಚಾರಿಕ ಪ್ರಬಂಧಗಳ ಸಂಗ್ರಹ, ಹಾ.ಮಾ ನಾಯಕ,ಕನ್ನಡದಲ್ಲಿ ಅಂಕಣ ಸಾಹಿತ್ಯ, ಸೃಷ್ಟಿ ಸೌರಭ, ಮಾತು ಮಥಿ ಸಿದಾಗ, ಸಾಹಿತ್ಯ ಸುಧೆ, ಸಾಹಿತ್ಯ ಸಂಜೀವಿನಿ, ಹೈದರಾಬಾದ ಕರ್ನಾಟಕದ ಪ್ರಮುಖ ಕಾದಂಬರಿಕಾರರು, ಮಡಿವಾಳ ...
READ MORE