ಪಂಡಿತ ಸದಾಶಿವ ಶಾಸ್ತ್ರಿಗಳು

Author : ರಾಜಶೇಖರ ಇಚ್ಚಂಗಿ

Pages 88

₹ 50.00




Year of Publication: 2020
Published by: ಶ್ರೀ ನಿಜಲಿಂಗೇಶ್ವರ ಗ್ರಂಥಮಾಲೆ
Address: ಶ್ರೀ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನಮಠ, ನಿಡಸೋಸಿ-591236 (ಜಿಲ್ಲೆ ಬೆಳಗಾವಿ)
Phone: 08333278633

Synopsys

ಹಿರಿಯ ಬರಹಗಾರ ಡಾ. ರಾಜಶೇಖರ ಇಚ್ಚಂಗಿ ಅವರ ಕೃತಿ-ಪಂಡಿತ ಸದಾಶಿವ ಶಾಸ್ತ್ರಿಗಳು. ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪದವೀಧರರಾದ ಸದಾಶಿವ ಶಾಸ್ತ್ರಿಗಳು, ರಾಜ್ಯದ ವಿವಿಧ ಮಠ-ಪೀಠಗಳಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ನಂತರ ಅವರು ಬೆಳಗಾವಿ ಜಿಲ್ಲೆಯ ನಿಡಸೋಸಿಯ ಶ್ರೀ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನಮಠದಲ್ಲಿ ನೆಲೆ ನಿಂತರು.

ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಪೂಜ್ಯ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿ ಅವರು ಕೃತಿಗೆ ಬೆನ್ನುಡಿ ಬರೆದು ‘ ಬಡತನದ ಬದುಕಿನಲ್ಲೇ ಬದುಕಿದ ಶಾಸ್ತ್ರಿಗಳು, ಬದುಕಿನುದ್ದಕ್ಕೂ ತಮ್ಮ ಆಚಾರ-ವಿಚಾರ, ಶ್ರಮ -ನಿಷ್ಠೆ ಮೊದಲಾದ ಮೌಲ್ಯಗಳನ್ನು ಕಾಪಾಡಿಕೊಂಡು ಬಂದವರು. ಯಾವುದೇ ಲಾಭ-ಲೋಭಗಳಿಗೆ ಸೋತವರಲ್ಲ. ಬಡತನದಲ್ಲೂ ಹೃದಯ ಸಿರಿವಂತಿಕೆಯಿಂದ ಬದುಕಿದವರು. ಇಂತಹ ವಿದ್ವಾಂಸರಾದ ಶಾಸ್ತ್ರಿಗಳು ಕುರಿತು ಡಾ. ರಾಜಶೇಖರ ಇಚ್ಚಂಗಿ ಅವರು ಅತ್ಯಂತ ಆಪ್ತವಾಗಿ ಈ ಕೃತಿಯಲ್ಲಿ ನಿರೂಪಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

ಲೇಖಕ ಡಾ. ರಾಜಶೇಖರ ಇಚ್ಚಂಗಿ ಅವರು ‘20ನೇ ಶತಮಾನದಲ್ಲಿ ಆರು ದಶಕಗಳವರೆಗೆ ಬೆಳಗಾವಿ ಪರಿಸರದಲ್ಲಿ ಬದುಕಿ ಕನ್ನಡ ಕಾವ್ಯ ಪ್ರಪಂಚಕ್ಕೆ ಹತ್ತು ಪುರಾಣ ಕಾವ್ಯಕೃತಿಗಳನ್ನು ನೀಡಿದ ಸದಾಶಿವ ಶಾಸ್ತ್ರಿಗಳ ಅವಿಸ್ಮರಣೀಯ ಕೊಡುಗೆ, ಅವರ ಆದರ್ಶಮಯ ಜೀವನ ಕುರಿತು ಬರೆಯುವ ಭಾಗ್ಯ ತಮ್ಮದು’ ಎಂದು ಹೇಳಿದ್ದಾರೆ.

About the Author

ರಾಜಶೇಖರ ಇಚ್ಚಂಗಿ

ಲೇಖಕ ರಾಜಶೇಖರ ಇಚ್ಚಂಗಿ ಅವರು ಗದಗ ಜಿಲ್ಲೆಯ ಬಟ್ಟೂರದವರು. ಅವರು 1957 ಜೂನ್‌ 01ರಂದು ಜನಿಸಿದರು. ಸ್ನಾತಕೋತ್ತರ ಪದವಿ ಪಡೆದಿರುವ ಇವರು ವೃತ್ತಿಯಿಂದ ಪ್ರಾಧ್ಯಾಪಕರು. ‘ಪಾರ್ಶ್ವನಾಥ ಪುರಾಣ-ಒಂದು ತೌಲನಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಪಿಎಚ್‌.ಡಿ ಪದವಿ ಗಳಿಸಿದ್ದಾರೆ. ಕೃತಿಗಳು: ಚಿತ್ರ ಸಂಚಯ; ಬೆಟಗೇರಿ ಕೃಷ್ಣಶರ್ಮ, ಶಂಬಾಜೋಶಿ, ಅಣ್ಣಾ ಹಜಾರೆ, ಪಂಡಿತ ಸದಾಶಿವ ಶಾಸ್ತ್ರಿಗಳು- ವ್ಯಕ್ತಿ ಚಿತ್ರ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಕನ್ನಡ-ಕರ್ನಾಟಕ’, ‘ಕೆಲವು ಚಿಂತಕರು’ ಅವರ ವಿಮರ್ಶಾ ಕೃತಿಯಾಗಿದ್ದು ‘ಸಂಸ್ಕೃತಿ ಶೋಧ’ ಅವರ ಸಂಶೋಧನಾ ಕೃತಿ. ‘ಅಡವಿಸಿರಿ’, ‘ಹಿರಣ್ಯ ಗಂಗೋತ್ರಿ’, ‘ಅರ್ಪಣ’, ‘ಬೆಳಗಾವಿ ಬೆಡಗು’ ಅವರ ಸಂಪಾದಿತ ಕೃತಿಗಳು. ಬೆಳಗಾವಿ ಜಿಲ್ಲೆಯ ಸಾಂಸ್ಕೃತಿಕ ವೈವಿಧ್ಯ. ಅವರ ಮಹತ್ವದ ಕೃತಿ. ಅವರಿಗೆ ಕರ್ನಾಟಕ ಇತಿಹಾಸ ...

READ MORE

Related Books