‘ವ್ಹಿ. ಜಿ. ಅಂದಾನಿ’ ಕಲಾವಿದರು, ಲೇಖಕ ಶಿವಾನಂದ ಎಚ್. ಬಂಟನೂರು ಅವರು ರಚಿಸಿದ್ದು, ಲಲಿತ ಕಲಾ ಕ್ಷೇತ್ರಕ್ಕೆ ತಮ್ಮ ಜೀವನವನ್ನೇ ಮುಡಿಪಿಟ್ಟ ಕಲಾವಿದ ವ್ಹಿ.ಜಿ. ಅಂದಾನಿ ಅವರ ಕುರಿತಾದ ಪ್ರಬಂಧ ಸಂಕಲನ.ಕಲಬುರಗಿಯಲ್ಲಿ ಐಡಿಯಲ್ ಫೈನ್ ಆರ್ಟ್ ಎಂಬ ಸಂಸ್ಥೆ ಸ್ಥಾಪಿಸಿ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಅಂದಾನಿ ಅವರ ಕಲಾ ಬದುಕಿನ ಅನಾವರಣವೇ ಈ ಕೃತಿ.
ಬಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಖೈನೂರರಲ್ಲಿ 1967ರಲ್ಲಿ ಜನಿಸಿದ ಶಿವಾನಂದ ಬಂಟನೂರರು ಚಿತ್ರ ಕಲೆಗೆ ಸಂಬಂಧಿಸಿದಂತೆ ಎ.ಎಂ., ಜಿ.ಡಿ (ಆರ್)ಗಳಲ್ಲದೆ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಸಂಶೋಧನಾ ಅನುದಾನ ಪಡೆದು 2002ರಲ್ಲಿ 'ಕರ್ನಾಟಕ ಜನಪದ ಶಿಲ್ಪಕಲೆ' ಕುರಿತು ಪಿಎಚ್.ಡಿ. ಪದವಿ ಪಡೆದಿದ್ದಾರೆ. ಮೂಲತ ಕಲಾವಿದರಾದ ಬಂಟನೂರ ಅವರು ಬೆಂಗಳೂರಿನ ವೆಂಕಟಪ್ಪ ಕಲಾಶಾಲೆ ಸೇರಿದಂತೆ ಹಲವಾರು ಕಡೆಗಳಲ್ಲಿ ಏಕವ್ಯಕ್ತಿ ಪ್ರದರ್ಶನವನ್ನೂ ಪೂನಾ, ಗೋವ ತಮಿಳುನಾಡು ಸೇರಿದಂತೆ ರಾಜ್ಯದ ಹಲವಾರು ಕಡೆ ಸಮೂಹ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಚಿತ್ರಕಲೆಯ ಸ್ನಾತಕೋತ್ತರ ವ್ಯಾಸಂಗದಲ್ಲಿ ಪ್ರಥಮ ...
READ MORE