ಕೌಜಲಗಿ ನಿಂಗವ್ವ- ಜಾನಪದ ತಜ್ಞ ಶ್ರೀರಾಮ ಇಟ್ಟಣ್ಣವರ ಬರೆದ ಜೀವನ ಚಿತ್ರ ಕೃತಿ. ಶ್ರೀಕೃಷ್ಣ ಪಾರಿಜಾತ ರಂಗಭೂಮಿಯ ಆರಂಭದ ಕಲಾವಿದೆ. ಅವಳ ಜೀವನ ಚಿತ್ರಣ ಈ ಗ್ರಂಥದಲ್ಲಿದೆ. ನಟಿಯಾಗಿ ಕಂಪನಿಯೊಂದರ ಒಡತಿಯಾಗಿ ಜೀವನ ಸವೆಸಿದ ಕೌಜಲಗಿ ನಿಂಗವ್ವ ಅವರ ಬದುಕು, ಪಾರಿಜಾತ ರಂಗಭೂಮಿಯ ಇತಿಹಾಸದಲ್ಲಿ ಒಂದು ರೋಚಕ ಅಧ್ಯಾಯ. ನಿಂಗವ್ವನ ವೈಯುಕ್ತಿಕ ಬದುಕು ಸಾಧನೆಯೊಂದಿಗೇ ಈ ಪರಂಪರೆಯ ಹೆಜ್ಜೆ ಗುರುತುಗಳನ್ನು ಈ ಪುಸ್ತಕದಲ್ಲಿ ನೋಡಬಹುದು. ಪ್ರಸ್ತುತ ಕೃತಿಯು ಕೌಜಲಗಿ ನಿಂಗವ್ವನ ಕಲೆ, ಸ್ವಭಾವ, ಜೀವನಕ್ಕೆ ಸಂಬಂಧಿಸಿದ ವಿಷಯಗಳು ಈ ಕೃತಿಯಲ್ಲಿವೆ.
ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಹೊಳಿಸಾಲ ಬಳ್ಳಿ; ಗಾಲಿ ಉಳ್ಳತೈತಿ; ನೂರು ಶಿಶುಗೀತೆಗಳು; ಹಾಡುಣು ಬಾಪ್ರೇಮದ ಪಾಡಾ; ಹೊತ್ತು ಮೂಡುವ ಸಮಯ (ಕಾವ್ಯ), ಪಾರಿಜಾತದವರು (ನಾಟಕ), ಜನಪದ ಪಶುವೈದ್ಯ ಬೀಳಗಿ ಸಿದ್ಧಪ್ಪ; ಕೊಣ್ಣೂರ ಕರಿಸಿದ್ದೇಶ್ವರ ದೇವಸ್ಥಾನ (ಜಾನಪದೀಯ) ಹಲಗಲಿ-ಗ್ರಾಮ ಚಾನಪದ (ಅಧ್ಯಯನ), ಲಾವಣಿ: ಸಣ್ಣಾಟ (ಸಂಶೋಧನೆ) ತಟ್ಟಿ ಚಿನ್ನ-ಸಣ್ಣಾಟ; ...
READ MORE