‘ಭೀಮಸೇನ ಜೋಶಿ ವ್ಯಕ್ತಿ ಮತ್ತು ಅವರ ಸಂಗೀತ’ ಮೂಲ ಇಂಗ್ಲಿಷ್ ನಲ್ಲಿ ಮೋಹನ ನಾಡಕರ್ಣಿ ಅವರು ರಚಿಸಿರುವ ಕೃತಿಯನ್ನು ಸದಾನಂದ ಕನವಳ್ಳಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತ, ಅಬ್ದುಲ್ ಕರೀಮಖಾನ ಮತ್ತು ಅವರ ಘರಾಣಾ, ಭೀಮಸೇನರ ಗುರು ಸವಾಯಿ ಗಂಧರ್ವರು, ಕೌಟುಂಬಿಕ ಹಿನ್ನೆಲೆ ಮತ್ತು ಆರಂಭಿಕ ವರ್ಷಗಳು, ಗುರುವಿನ ಅನ್ವೇಷಣೆಯಲ್ಲಿ ಗ್ವಾಲಿಯರಿಗೆ, ಜಲಂದರಿನಲ್ಲಿ ಅನ್ವೇಷಣೆ ಅಂತ್ಯ, ಸವಾಯಿ ಗಂಧರ್ವರಲ್ಲಿ ಶಿಷ್ಯತ್ವ, ಸ್ವಗೃಹಾಗಮನ, ಪುನಃ ಪರ್ಯಟನಾಕಾಂಕ್ಷೆ- ಮುಂಬಯಿ, ರಾಮಪುರ ಮತ್ತು ಲಕ್ನೊ, ಸಾಂಪ್ರದಾಯಿಕತೆಯಿಂದ ಸಾರಸಂಗ್ರಹತೆಯೆಡೆಗೆ, ವಿಸ್ತೃತ ವಲಯದಲ್ಲಿ ಸೇರಿದಂತೆ ಒಟ್ಟು 23 ಲೇಖನಗಳು ಸಂಕಲನಗೊಂಡಿವೆ. ಇವು ಭೀಮಸೇನ ಜೋಶಿಯವರ ಬದುಕು ಮತ್ತು ಸಂಗೀತವನ್ನು ಆಪ್ತವಾಗಿ ಪರಿಚಯಿಸುತ್ತವೆ.
ಸಾಹಿತ್ಯ, ಸಂಗೀತ, ಕ್ರೀಡಾ ಪ್ರೇಮಿ ಸದಾನಂದ ಕನವಳ್ಳಿಯವರು (ಜನನ: 18-09-1935) ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದವರು. ತಂದೆ ವೀರಪ್ಪ, ತಾಯಿ ವೀರಮ್ಮ. ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. (ಇಂಗ್ಲಿಷ್) ಮತ್ತು ಎಂ.ಎ. (ಇಂಗ್ಲಿಷ್) ಪದವೀಧರರು. ಡಾ. ವಿ.ಕೃ. ಗೋಕಾಕ್ ಮತ್ತು ಅರ್ಮೆಂಡೊ ಮೆನೆಜಿಸ್ ಶಿಷ್ಯರು. ಹುಬ್ಬಳ್ಳಿಯ ಪಿ.ಸಿ. ಜಾಬಿನ ವಿಜ್ಞಾನ ಕಾಲೇಜು, ವಿಜಯ ಕಾಲೇಜು, ವಿಜಾಪುರದ ಎ.ಎಸ್.ಪಿ. ಕಾಮರ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜು ಮತ್ತು ಮುನಿಸಿಪಲ್ ಆರ್ಟ್ಸ್ ಕಾಲೇಜು-ಲಕ್ಷ್ಮೇಶ್ವರದಲ್ಲಿ ಪ್ರಾಚಾರ‍್ಯರಾಗಿ ನಿವೃತ್ತರಾದರು. 1991-92ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ, ಅಲ್ಪಾವಧಿಯಲ್ಲಿ 110 ಪುಸ್ತಕಗಳ ಪ್ರಕಟಣೆಯ ದಾಖಲೆ ಮಾಡಿದ್ದರು. ಕರ್ನಾಟಕ ವಿ.ವಿ ...
READ MORE