`ಆಧುನಿಕ ಮೂಡಿಗೆರೆಯ ನಿರ್ಮಾತೃ ಮಾಕೋನಹಳ್ಳಿ ದೊಡ್ಡಪ್ಪಗೌಡ’ ಕೃತಿಯು ಮೇಕನಗದ್ದೆ ಲಕ್ಷ್ಮಣಗೌಡ ಅವರು ರಚಿಸಿದ್ದಾರೆ. ಒಕ್ಕಲಿಗ ಸಾಧಕರು ಮಾಲಿಕೆಯ ವ್ಯಕ್ತಿ ಪರಿಚಯದ ಕೃತಿಯಾಗಿದೆ. ಮಾಕೋನಹಳ್ಳಿ ದೊಡ್ಡಪ್ಪಗೌಡರದು ಮಲೆನಾಡಿನ ಅತ್ಯಂತ ದೊಡ್ಡ ಹೆಸರು. ಅವರು ಮಾಕೋನಹಳ್ಳಿಯ ದೊಡ್ಡಮನೆಯ ವರಪುತ್ರ. ಹೆಚ್ಚಿನ ಸಾಂಪ್ರದಾಯಿಕ ಶಿಕ್ಷಣವಿಲ್ಲದಿದ್ದರೂ ಸಾಹಿತ್ಯ, ಕಲೆ, ಇತಿಹಾಸ, ಸಂಸ್ಕೃತಿ ಕುರಿತು ಆಳವಾಗಿ ಅಧ್ಯಯನ ನಡೆಸಿ ಅಪಾರ ವಿದ್ವತ್ತು ಒಳಗಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಅಸಹನೀಯ ಹಿಂಸೆ ಅನುಭವಿಸಿದವರು. ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ವೈಯಕ್ತಿಕ ಸುಖಕ್ಕೆ ಮಹತ್ವ ನೀಡದ ತ್ಯಾಗಿ ಅವರು. ತಾವು ಗಳಿಸಿದ್ದನ್ನು ಸಮಾಜದ ಏಳಿಗೆಗಾಗಿ ಬಳಸಿ ಜನರ ನೆಮ್ಮದಿಯ ಬದುಕಿನ ಕನಸು ಕಂಡವರು. ಮಲೆನಾಡಿನಲ್ಲಿ ಏಲಕ್ಕಿ ಸಂಶೋಧನ ಕೇಂದ್ರದ ಸ್ಥಾಪನೆಗೆ ಶ್ರಮಿಸಿದವರು, ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾದುದು. ಮೂಲತಃ ಕಾಫಿ, ಏಲಕ್ಕಿ ಬೆಳೆಗಾರರಾದರೂ ಸಾಹಿತ್ಯ ರಚನೆ, ಸಂಶೋಧನೆಯಲ್ಲಿ ತೊಡಗಿದ್ದವರು, ಹಲವು ಮೌಲಕ ಕೃತಿಗಳ ಕರ್ತೃವಾಗಿರುವ ಮಾಕೋನಹಳ್ಳಿ ದೊಡ್ಡಪ್ಪಗೌಡರು “ಆಧುನಿಕ ಮೂಡಿಗೆರೆಯ ನಿರ್ಮಾತೃ' ಎಂಬ ಅಭಿದಾನಕ್ಕೆ ಪಾತ್ರರಾಗಿದ್ದಾರೆ.
ಮೇಕನಗದ್ದೆ ಲಕ್ಷ್ಮಣಗೌಡ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಮೇಕನಗದ್ದೆಯವರು. ಲಕ್ಷ್ಮಣಗೌಡರು ವೃತ್ತಿಯಿಂದ ವಿಜ್ಞಾನ ಶಿಕ್ಷಕರು. ಪ್ರವೃತ್ತಿಯಿಂದ ಸಾಹಿತ್ಯ ರಚನೆ ಹಾಗೂ ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದಾರೆ. ಮಲೆನಾಡಿನ ಹಲವು ಪ್ರಸಿದ್ದ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಬರೆದಿದ್ದು, ಹಲವಾರು ಮನೆತನಗಳ ಗತ ಇತಿಹಾಸವನ್ನು ಕಟ್ಟಿಕೊಟ್ಟಿದ್ದಾರೆ. ಮಲೆನಾಡಿನ ಸಾಂಸ್ಕೃತಿಕ ಅಧ್ಯಯನ, ಜಾನಪದ ಹಾಗೂ ಶಾಸನಗಳ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದು, ಕರ್ನಾಟಕದ ಜಾನಪದ ವಿಶ್ವವಿದ್ಯಾಲಯದ ಜಾನಪದ ನಿಘಂಟು ಯೋಜನೆಯ ಜಿಲ್ಲಾ ಮಾಹಿತಿ ಸಂಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೃತಿಗಳು : ಮೂಕ್ತಿಹಳ್ಳಿ ಎಂ.ಆರ್. ಸಣ್ಣಸಿದ್ಧೇಗೌಡರ ಜೀವನಚರಿತ್ರೆ, ಬ್ರಹ್ಮಲಿಂಗೇಶ್ವರನ ಮಡಿಲಲ್ಲಿ, ಊರುಬಗೆ ಸಾವಿರ, ದೇವವೃಂದ, ಮರೆತುಹೋದ ಮಲೆನಾಡಿನ ಚಿತ್ರಗಳು, ಸೂರ್ಯರಶ್ಮಿಗೆ ನಮನ, ...
READ MORE