`ನಾಗರ್ಜುನ ' ಪುರಾಣ ಪುರುಷರ ವ್ಯಕ್ತಿಚಿತ್ರಣ ನೀಡುವ ಪುಸ್ತಕವಿದು. ಲೇಖಕ ಜಿ. ಜ್ಞಾನಾನಂದ ರಚಿಸಿದ್ದಾರೆ. ಈ ಕೃತಿಯಲ್ಲಿ, ಪ್ರಾಚೀನ ಭಾರತದ ಅಸಾಧಾರಣ ಮೇಧಾವಿ, ಬುದ್ಧನ ಶಿಷ್ಯ. ರಾಸಾಯನ ಶಾಸ್ತ್ರ, ಧರ್ಮಶಾಸ್ತ್ರ, ತರ್ಕಶಾಸ್ತ್ರ, ವೈದ್ಯಶಾಸ್ತ್ರ, ದರ್ಶನ, ಕಲೆ, ಸಾಹಿತ್ಯ ಎಲ್ಲದರಲ್ಲಿ ನಿಸ್ಸೀಮನಾದ ಪ್ರತಿಭಾವಂತ ಎಂದು ನಾಗರ್ಜುನನ ಕುರಿತು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ನಾಗರ್ಜುನನ ಬಾಲ್ಯ ಜೀವನ, ಅಸಾಧಾರಣ ಬುದ್ದಿಶಕ್ತಿ, ಬುದ್ಧನ ಸಿಷ್ಯನಾದ ಪರಿ, ಸಾಹಿತ್ಯ ಲೋಕದ ಸಾಧನೆಗಳು, ಶಾಸ್ತ್ರದ ಬಗೆಗೆ ಹೊಂದಿದ ಅಭೂತಪೂರ್ವ ಪಾಂಡಿತ್ಯ ಹೀಗೆ ನಾಗರ್ಜುನ ಜೀವನ ಕುರಿತಾದ ಹಲವು ಆಯಾಮಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.
ಲೇಖಕ ಜ್ಞಾನಾನಂದರು ಮೂಲತಃ ಚಿಕ್ಕಬಳ್ಳಾಪುರದ ನಂದಿ ಗ್ರಾಮದವರು. ತಂದೆ- ಎಂ.ಆರ್. ಜಿ. ಶಂಕರ್, ತಾಯಿ ಈಶ್ವರಮ್ಮ. ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ ಪಡೆದ ಜ್ಞಾನಾನಂದರು ಆನಂತರ ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪಡೆದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ‘ಕನ್ನಡ ಮಹಾಭಾರತಗಳಲ್ಲಿ ಶಿಲ್ಪ ಮತ್ತು ಶಿಲ್ಪಿ’ ಎಂಬ ಮಹಾಪ್ರಬಂಧ ಮಂಡಿಸಿ, ಪಿ.ಎಚ್.ಡಿ. ಪಡೆದರು. ಚೆನ್ನೈನ ದಕ್ಷಿಣ ಭಾರತ ಹಿಂದಿಸಭಾದಿಂದ ರಾಷ್ಟ್ರಭಾಷಾ ಪ್ರವೀಣ್, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಿಂದ ಸ್ನಾತಕೋತ್ತರ ಸರ್ಟಿಫಿಕೇಟ್ (ಸ್ಟ್ಯಾಟಿಸ್ಟಿಕಲ್ ಅಪ್ಲೈಡ್ ಟು ಇಂಡಸ್ಟ್ರಿ), ಸೂಪರ್‌ವೈಸರಿ ಡೆವಲಪ್‌ಮೆಂಟ್ ಡಿಪ್ಲೊಮ ಮತ್ತು ಡಿಪ್ಲೊಮ ...
READ MORE